• 15 December 2018 21:47
Jai Kannada
Jai Kannada
Blog single photo
December 04, 2017

ಹಿಂದಿಚಿತ್ರರಂಗದ  ಪ್ರಸಿದ್ಧ ನಟ ಶಶಿಕಪೂರ್ ಇನ್ನಿಲ್ಲ 

 ನವದೆಹಲಿ:  ಹಿಂದಿ ಚಲನಚಿತ್ರರಂಗದ ಹಿರಿಯ ನಟ ಶಶಿಕಪೂರ್ ಸುದೀರ್ಘ ಕಾಯಿಲೆಯ ಬಳಿಕ ಸೋಮವಾರ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಸಂಜೆ 5.20ಕ್ಕೆ ಶಶಿ ಕಪೂರ್ ಚಿರನಿದ್ರೆಗೆ ಜಾರಿದ್ದಾಗಿ ಆಸ್ಪತ್ರೆಯ ನಿರ್ದೇಶಕ ಡಾ. ರಾಮ ನಾರಾಯಣ್ ತಿಳಿಸಿದ್ದಾರೆ.
 ಅನೇಕ ವರ್ಷಗಳಿಂದ ಮೂತ್ರಪಿಂಡದ ಕಾಯಿಲೆ ಸಮಸ್ಯೆ ಎದುರಿಸುತ್ತಿದ್ದ ಅವರು ಕೆಲವು ವರ್ಷಗಳಿಂದ ಡಲಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರು ಎಂದು ರಣದೀರ್ ಕಪೂರ್ ತಿಳಿಸಿದರು.
 ಪ್ರಥ್ವಿರಾಜ್ ಕಪೂರ್ ನಾಟಕಗಳಲ್ಲಿ ಬಾಲನಟನಾಗಿ ವೃತ್ತಿಜೀವನ ಆರಂಭಿಸಿದ ಕಪೂರ್ ದೀವಾರ್(1975), ಸತ್ಯಂ ಶಿವಂ ಸುಂದರಂ(1978), ಜುನೂನ್(1978), ನಮಕ್ ಹಲಾಲ್(1982) ಮುಂತಾದ ಚಿತ್ರಗಳಿಗೆ ಹೆಸರಾಗಿದ್ದಾರೆ.
 2011ರಲ್ಲಿ ಭಾರತ ಸರ್ಕಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. 2015ರಲ್ಲಿ ಅವರ ಕುಟುಂಬದಲ್ಲಿ ದಾದಾ ಸಾಬೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೂರನೇ ವ್ಯಕ್ತಿಯಾದರು. ಇಂಗ್ಲಿಷ್ ನಟಿ ಜೆನ್ನಿಫರ್ ಅವರನ್ನು ವಿವಾಹವಾಗಿದ್ದ ಶಶಿ ಕಪೂರ್ 1978ರಲ್ಲಿ ಅವರ ಜತೆ ಪ್ರಥ್ವಿ ಥಿಯೇಟರ್ ಸ್ಥಾಪಿಸಿದರು. ಅವರು ಪುತ್ರಿ ಸಂಜನಾ, ಪುತ್ರರಾದ ಕುನಾಲ್ ಮತ್ತು ಕರಣ್ ಅವರನ್ನು ಬಿಟ್ಟು ಅಗಲಿದ್ದಾರೆ. ಅವರ ಸಾವಿಗೆ ಅನೇಕ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
 

Recent Comments

Leave Comments

footer
Top