• 15 December 2017 23:25
Jai Kannada
Jai Kannada
Blog single photo
December 04, 2017

ಪ್ರತಾಪರಿಗೆ ಟ್ವಿಟರ್‌ನಲ್ಲೇ ತಿರುಗೇಟು ನೀಡಿದ ಎಸ್‌ಪಿ

ಮೈಸೂರು: ಪ್ರತಾಪ್ ಸಿಂಹ ಅವರ ಟ್ವೀಟ್‌ಗೆ ಎಸ್‌ಪಿ ರವಿ ಚೆನ್ನಣ್ಣವರ್ ಟ್ವಿಟರ್‌ನಲ್ಲೇ  ತಿರುಗೇಟು ನೀಡಿದ್ದಾರೆ. ಹೌದು ಅಣ್ಣಾಮಲೈ, ಅಧಿಕಾರಿಗಳಿಂದ ನಾನು ಕಲಿಯಬೇಬೇಕಿದೆ. ನಾವು ಎಂದೂ ಪರಿಪೂರ್ಣರಲ್ಲ,  ಕಲಿಯೋದು ಬಹಳವಿದೆ. ಆದರೆ ಸಂವಿಧಾನದ ನಿರ್ದೇಶನದಂತೆ ನಾವು ಕೆಲಸ ಮಾಡುತ್ತೇವೆಂದು ಟಾಂಗ್ ನೀಡಿದರು. ನಾವು ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ ಎಂದು ಪ್ರತಾಪ್ ಸಿಂಹ್ ಅವರಿಗೆ ಪರೋಕ್ಷವಾಗಿ ಹೇಳಿದರು. ಪ್ರತಾಪ್ ಸಿಂಹ ಅವರು ತಮ್ಮ ಟ್ವೀಟ್‌ನಲ್ಲಿ ಎಸ್‌ಪಿ ಮತ್ತು ಪೊಲೀಸರು ಆಳುವ ಪಕ್ಷದ ಆಳುಗಳು ಎಂದು ಹೇಳಿದ್ದಕ್ಕೆ  ಪ್ರತಿಯಾಗಿ ಎಸ್‌ಪಿ ಟ್ವೀಟ್ ಮಾಡಿದ್ದಾರೆ.

Recent Comments

Leave Comments

footer
Top