• 15 December 2017 23:24
Jai Kannada
Jai Kannada
Blog single photo
December 03, 2017

ಪ್ರತಾಪ್ ಸಿಂಹ ಬಂಧನ, ಬಿಡುಗಡೆ, ಹುಣಸೂರು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ 

ಮೈಸೂರು: ಹುಣಸೂರಿನಲ್ಲಿ ಹನುಮಜಯಂತಿ ಮೆರವಣಿಗೆ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಬಂಧನ ಖಂಡಿಸಿ ಹುಣಸೂರಿನಲ್ಲಿ ಬಂದ್ ಆಚರಿಸಲಾಗಿದೆ.  ಹನುಮಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ಪೊಲೀಸರ ಬ್ಯಾರಿಕೇಡ್ ಮುರಿದು, ಕಾರನ್ನು ನುಗ್ಗಿಸಿದ್ದರಿಂದ ಪ್ರತಾಪ್ ಸಿಂಗ್ ಅವರನ್ನು ಬಂಧಿಸಿ ಏಳೆಂಟು ಗಂಟೆಗಳ ಕಾಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕಾರಿನಲ್ಲಿ ಸುತ್ತಿಸಲಾಗಿತ್ತು. ಆದರೆ  ಪ್ರತಾಪ್ ಬಂಧನಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಗಿ ಬಿಜೆಪಿ ಹುಣಸೂರು ಬಂದ್‌ಗೆ ಕರೆ ನೀಡಿದ ಬಳಿಕ ಪ್ರತಾಪ್ ಸಿಂಹ ಅವರನ್ನು ಬಿಡುಗಡೆ ಮಾಡಲಾಗಿದೆ.  ಇಂದು ಹುಣಸೂರು  ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಟೋ, ಟ್ಯಾಕ್ಸಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು,  ಕೆಲವು ಅಂಗಡಿ, ಮುಂಗಟ್ಟುಗಳು ಮಾತ್ರ ಬಂದ್ ಆಗಿವೆ. ಪೊಲೀಸರ ವಿರುದ್ಧ ಪ್ರತಾಪ್ ತಮ್ಮ ಟ್ವೀಟ್ ನಲ್ಲಿ  ಆಕ್ರೋಶವನ್ನು ವ್ಯಕ್ತಪಡಿಸಿದರು.  ನೀವು ಆಳುವ ಪಕ್ಷದ ಆಳುಗಳು ಎನ್ನುವುದನ್ನು ಒಪ್ಪಿಕೊಳ್ಳಿ ಎಂದು ಪೊಲೀಸರನ್ನು ಉದ್ದೇಶಿಸಿ ತಿಳಿಸಿದರು..  ಹುಣಸೂರು ಪಟ್ಟಣದಾದ್ಯಂತ ನಿಷೇಧಾಜ್ಞೆ ಮುಂದುವರಿದಿದ್ದು, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಜನರು ಎಂದಿನಂತ ದೈನಂದಿನ ಕಾರ್ಯದಲ್ಲಿ ನಿರತರಾಗಿದ್ದಾರೆ.  

Recent Comments

Leave Comments

footer
Top