• 15 December 2017 23:34
Jai Kannada
Jai Kannada
Blog single photo
December 02, 2017

ವೈದ್ಯರು-ವೈದ್ಯಕೀಯ ಕೇಂದ್ರಗಳ ಅಪವಿತ್ರ ಮೈತ್ರಿ ಬಯಲು: 100 ಕೋಟಿ ಕಪ್ಪು ಹಣ ಪತ್ತೆ

ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳು ವೈದ್ಯಕೀಯ ಕೇಂದ್ರಗಳು ಮತ್ತು ವೈದ್ಯರ ನಡುವೆ ಬಹು ಪದರಗಳ ನಂಟನ್ನು ಭೇದಿಸಿದ್ದು, 100 ಕೋಟಿ ರೂ. ಕಪ್ಪು ಹಣವನ್ನು ಪತ್ತೆಹಚ್ಚಿದ್ದಾರೆ. ಕೆಲವು ಐವಿಎಫ್ ಕ್ಲಿನಿಕ್‌ ಗಳು ಮತ್ತು ಡಯಾಗ್ನಸ್ಟಿಕ್ ಕೇಂದ್ರಗಳಲ್ಲಿ ಐಟಿ ಇಲಾಖೆ ಶೋಧಿಸಿದಾಗ ಈ ಕಪ್ಪು ಹಣ ಪತ್ತೆಯಾಗಿದೆ. ವೈದ್ಯಕೀಯ ಪರೀಕ್ಷೆಗಳನ್ನು ಸೂಚಿಸಲು ವೈದ್ಯರಿಗೆ ಹಣ ಪಾವತಿ ಮಾಡಲಾಗುತ್ತಿತ್ತೆಂದು ಐಟಿ ಪ್ರತಿಪಾದಿಸಿದೆ. ಐಟಿ ಅಧಿಕಾರಿಗಳು ಎರಡು ಇನ್ ವಿಟ್ರೋ ಸಂತಾನ ಚಿಕಿತ್ಸೆ ಕೇಂದ್ರಗಳು ಮತ್ತು  5 ಡಯಾಗ್ನಸ್ಟಿಕ್ ಕೇಂದ್ರಗಳ ಮೇಲೆ ದಾಳಿ ಮಾಡಿದಾಗ ಈ ಅಕ್ರಮ ಹಣ ಪತ್ತೆಯಾಗಿದ್ದು, 1.4 ಕೋಟಿ ರೂ.ಯ ನಗದು ಮತ್ತು 3.5 ಕೆಜಿ ಆಭರಣ ಮತ್ತು ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.  

Recent Comments

Leave Comments

footer
Top