• 14 December 2018 18:12
Jai Kannada
Jai Kannada
Blog single photo
March 20, 2018

ವಯಸ್ಸಿನ ಗಡಿಯಾರ ನಿಧಾನಗೊಳಿಸಲು ನಿಯಮಿತ ವ್ಯಾಯಮ 

ವಾಷಿಂಗ್ಟನ್: ನಿಮ್ಮ ವಯಸ್ಸಿನ ಗಡಿಯಾರ ವೇಗವಾಗಿ ಓಡದಂತೆ ನಿಧಾನಗೊಳಿಸಬೇಕೇ? ಅಧ್ಯಯನವೊಂದರ ಪ್ರಕಾರ, ಜೀವಿತಾವಧಿಯಲ್ಲಿ ನಿಯಮಿತ ವ್ಯಾಯಾಮ ಮಾಡುವುದರಿಂದ ನಿಮ್ಮ ವಯಸ್ಸಾಗುವಿಕೆಯನ್ನು ವಿಳಂಬಗೊಳಿಸಬಹುದು.

ಬರ್ಮಿಂಗ್ ಹ್ಯಾಮ್ ಮತ್ತು ಕಿಂಗ್ಸ್ ಕಾಲೇಜ್ ಲಂಡನ್ ವಿವಿಯ ಸಂಶೋಧಕರು ತಮ್ಮ ಜೀವಿತಾವಧಿಯಲ್ಲಿ ವ್ಯಾಯಾಮಗಳಿಗೆ ಮೊರೆಹೋಗಿದ್ದ ವಯಸ್ಕರ ಆರೋಗ್ಯವನ್ನು ಪರೀಕ್ಷಿಸಿದರು. ಈ ಅಧ್ಯಯನವು 55ರಿಂದ 79ರ ವಯಸ್ಸಿನ 125 ಹವ್ಯಾಸಿ ಸೈಕಲ್ ಸವಾರರನ್ನು ಆರಿಸಿಕೊಂಡಿತು. ಅವರ ಪೈಕಿ 84 ಮಂದಿ ಪುರುಷರು ಮತ್ತು  41 ಜನರು ಮಹಿಳೆಯರು. 6.5 ಗಂಟೆಗಳಲ್ಲಿ ಪುರುಷರು 100 ಕಿಮೀ ಸೈಕಲ್ ತುಳಿಯಲು ಶಕ್ತರಾಗಿದ್ದರು.

ಮಹಿಳೆಯರು 5.5 ಗಂಟೆಗಳಲ್ಲಿ 60 ಕಿಮೀ ಸೈಕಲ್ ಸವಾರಿ ಮಾಡಲು ಶಕ್ತರಾಗಿದ್ದರು.ಆಯ್ಕೆಯಲ್ಲಿ ಧೂಮಪಾನಿಗಳು, ಅತೀ ಹೆಚ್ಚು ಮದ್ಯಪಾನಿಗಳು ಮತ್ತು ಅಧಿಕ ರಕ್ತದ ಒತ್ತಡ ಅಥವಾ ಇತರೆ ಅನಾರೋಗ್ಯ ಸ್ಥಿತಿಗಳ ವ್ಯಕ್ತಿಗಳನ್ನು ಹೊರಗಿಡಲಾಗಿತ್ತು. ಭಾಗವಹಿಸಿದವರು ಪ್ರಯೋಗಾಲಯದಲ್ಲಿ ಅನೇಕ ಪರೀಕ್ಷೆಗಳ ಸರಣಿಗೆ ಒಳಪಟ್ಟರು. ನಿಯಮಿತ ವ್ಯಾಯಾಮ ಚಟುವಟಿಕೆ ಮಾಡದ ವಯಸ್ಕರ ಗುಂಪನ್ನು ಇವರೊಂದಿಗೆ ಹೋಲಿಕೆ ಮಾಡಲಾಯಿತು.

ನಿಯಮಿತವಾಗಿ ವ್ಯಾಯಾಮ ಮಾಡುವ ವಯಸ್ಕರಲ್ಲಿ ಸ್ನಾಯು ರಾಶಿ ಮತ್ತು ಬಲವು ಕುಂಠಿತಗೊಳ್ಳುವುದಿಲ್ಲ ಎಂದು ಅಧ್ಯಯನ ತೋರಿಸಿದೆ. ಸೈಕಲ್ ಸವಾರರಿಗೆ ಕೂಡ ವಯಸ್ಸು ಹೆಚ್ಚಾದಂತೆ ದೇಹದ ಕೊಬ್ಬು ಮತ್ತು ಕೊಲೆಸ್ಟರಾಲ್ ಕೂಡ ಅಧಿಕ ಮಟ್ಟದಲ್ಲಿದ್ದು, ಟೆಸ್ಟೊಸ್ಟೆರಾನ್ ಮಟ್ಟವು ಕೂಡ ಅಧಿಕವಾಗಿತ್ತು.

ಈ ವರದಿಯಲ್ಲಿ 65ಕ್ಕಿಂತ ಹೆಚ್ಚು ವಯಸ್ಸಿನ ಅರ್ಧಕ್ಕಿಂತ ಕಡಿಮೆ ಮಂದಿ ಮಾತ್ರ ಆರೋಗ್ಯವಾಗಿ ಉಳಿಯಲು ಸಾಕಷ್ಟು ವ್ಯಾಯಾಮ ಮಾಡುತ್ತಾರೆ ಮತ್ತು ವ್ಯಾಯಾಮ ಮಾಡಿರದ ಅರ್ಧಕ್ಕಿಂತ ಹೆಚ್ಚಿನ ಜನರಲ್ಲಿ ಒಂದೆರಡು ಕಾಯಿಲೆಗಳು ಇರುವುದನ್ನು ಉಲ್ಲೇಖಿಸಲಾಗಿದೆ.

Recent Comments

Leave Comments

footer
Top