• 17 December 2018 01:14
Jai Kannada
Jai Kannada
Blog single photo
March 14, 2018

ಖ್ಯಾತ ಬೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ನಿಧನ 

ಲಂಡನ್: ಖ್ಯಾತ ಬೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ 76ನೇ ವಯಸ್ಸಿನಲ್ಲಿ ಕೇಂಬ್ರಿಜ್‌ನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಕಪ್ಪು ರಂಧ್ರ ಮತ್ತು ಸಾಪೇಕ್ಷತೆಗಾಗಿ ಬ್ರಿಟಿಷ್ ವಿಜ್ಞಾನಿ ಖ್ಯಾತಿ ಗಳಿಸಿದ್ದರು. ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ ಸೇರಿದಂತೆ ಅನೇಕ ಜನಪ್ರಿಯ ವೈಜ್ಞಾನಿಕ ಪುಸ್ತಕಗಳನ್ನು ಬರೆದಿದ್ದರು.

ಸ್ಟೀಫನ್ ಅವರ ಇನ್ನೊಂದು ಸಾಧನೆಯೇನೆಂದರೆ 22ನೇ ವಯಸ್ಸಿನಲ್ಲಿ ಅಪರೂಪದ ನರರೋಗವನ್ನು ಅವರಲ್ಲಿ ಗುರುತಿಸಲಾಗಿದ್ದು, ಕೆಲವೇ ವರ್ಷಗಳ ಕಾಲ ಜೀವಿಸಿರುತ್ತಾರೆಂದು ಹೇಳಲಾಗಿತ್ತು.

.ಈ ಕಾಯಿಲೆಯಿಂದ ಅವರು ವೀಲ್‌ಚೇರ್‌ನಲ್ಲಿ ಕಾಲಕಳೆಯುವಂತಾಯಿತು ಮತ್ತು ಮಾತನಾಡಲು ಕೂಡ ಅಶಕ್ತರಾದರು. ಆದರೂ ಕೂಡ ತಮ್ಮ ವೈಜ್ಞಾನಿಕ ಸಂಶೋಧನೆಯಲ್ಲಿ ನಿರತರಾಗಿ ಅನೇಕ ಸಂಶೋಧನೆಗಳಲ್ಲಿ ಯಶಸ್ವಿಯಾದರು. ಅವರೊಬ್ಬ ಮಹಾನ್ ವಿಜ್ಞಾನಿಯಾಗಿದ್ದು, ಅವರ ಕೆಲಸ ಮತ್ತು ಪರಂಪರೆ ಅನೇಕ ವರ್ಷಗಳ ಕಾಲ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದು ಅವರ ಮಕ್ಕಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
.

Recent Comments

Leave Comments

footer
Top