• 17 December 2018 01:14
Jai Kannada
Jai Kannada
Blog single photo
March 14, 2018

ಟೆಲಿ‌ಫೋನ್ ಹಗರಣ: ದಯಾನಿಧಿ,, ಕಲಾನಿಧಿ ಆರೋಪಮುಕ್ತ 


ಟೆಲಿಫೋನ್ ಹಗರಣಕ್ಕೆ ಸಂಬಂಧಿಸಿದಂತೆ ದಯಾನಿಧಿ ಮಾರನ್ ಮತ್ತು ಕಲಾನಿಧಿ ಮಾರನ್ ಅವರನ್ನು ಆರೋಪಮುಕ್ತಗೊಳಿಸಿ ಸಿಬಿಐ ನ್ಯಾಯಾಲಯ ಆದೇಶ ನೀಡಿದೆ. ದಯಾನಿಧಿ ಮಾರನ್ ಸಚಿವರಾಗಿದ್ದಾಗ ತಮ್ಮ ವ್ಯವಹಾರಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ .

ಎಲ್ಲಾ ಏಳು ಆರೋಪಿಗಳನ್ನು ಈ ಪ್ರಕರಣದಿಂದ ದೋಷಮುಕ್ತಿಗೊಳಿಸಿರುವುದಾಗಿ ವಿಶೇಷ ನ್ಯಾಯಾಧೀಶ ನಟರಾಜನ್ ತಿಳಿಸಿದ್ದಾರೆ. ಅವರ ವಿರುದ್ಧ ಆರೋಪಗಳನ್ನು ಸಾಬೀತು ಮಾಡಲು ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯಾಧಾರವಿಲ್ಲ ಎಂದು ನ್ಯಾಯಾಧೀಶರು ತೀರ್ಮಾನಿಸಿದರು.
ದಯಾನಿಧಿ ಮಾರನ್ ಕೇಂದ್ರ ಸಂಪರ್ಕ ಖಾತೆ ಸಚಿವರಾಗಿದ್ದಾಗ, ಅವರ ಅಧಿಕಾರ ದುರುಪಯೋಗಪಡಿಸಿಕೊಂಡು ಚೆನ್ನೈನ ನಿವಾಸಗಳಲ್ಲಿ ಖಾಸಗಿ ಟೆಲಿಫೋನ್ ಎಕ್ಸ್‌ಚೇಂಜ್ ಅಳವಡಿಸಿದ್ದರೆಂದು ಆರೋಪಿಸಲಾಗಿತ್ತು.

ಸನ್ ನೆಟ್ವರ್ಕ್ ಒಳಗೊಂಡ ಬಿಸಿನೆಸ್ ವಹಿವಾಟುಗಳಿಗೆ ಈ ಸೌಲಭ್ಯವನ್ನು ಬಳಸಿಕೊಂಡಿರುವುದಾಗಿ ದೂರಲಾಗಿತ್ತು. ಇದರಿಂದ ಬೊಕ್ಕಸಕ್ಕೆ 1.78 ಕೋಟಿ ರೂ. ನಷ್ಟವಾಗಿರುವಾಗಿರುವುದಾಗಿ ಸಿಬಿಐ ಆರೋಪಿಸಿತ್ತು. ಸುಮಾರು 700ಕ್ಕೂ ಹೆಚ್ಚು ಟೆಲಿಕಾಂ ಲೈನ್‌ಗಳನ್ನು ಬೋಟ್ ಕ್ಲಬ್ ಮತ್ತು ಗೋಪಾಲಪುರಂನಲ್ಲಿರುವ ಅವರ ನಿವಾಸಗಳಲ್ಲಿ ಅಳಡಿಸಲಾಗಿತ್ತು ಎಂದು ಸಿಬಿಐ ಆರೋಪಿಸಿತ್ತು.

Recent Comments

Leave Comments

footer
Top