Jai Kannada
Jai Kannada
Blog single photo
March 14, 2018

ಕೆಜೆಪಿ, ಬಿಜೆಪಿ ಇಬ್ಭಾಗದಿಂದ ಲಾಟರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ 

ದಾವಣಗೆರೆ: ಸಿದ್ದರಾಮಯ್ಯ ಬಿಜೆಪಿ, ಕೆಜೆಪಿ ಇಬ್ಭಾಗದಿಂದ ಲಾಟರಿ ಮುಖ್ಯಮಂತ್ರಿಯಾದರು ಎಂದು ದಾವಣಗೆರೆಯಲ್ಲಿ ಪರಿಷತ್ ವಿಪಕ್ಷನಾಯಕ ಈಶ್ವರಪ್ಪ ಹೇಳಿದ್ದಾರೆ.ಸಿದ್ದರಾಮಯ್ಯ ದವಲತ್ತಿನ ಮಾತು ಬಿಟ್ಟರೆ ಬೇರೇನೂ ಮಾಡುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.

ಸೋಲುವ ಭೀತಿಯಿಂದ ಕ್ಯಾಬಿನೆಟ್ ಸಭೆ ಮುಂದೂಡಿದ್ದಾರೆ. ಮುಖ್ಯಮಂತ್ರಿಗಳಿಗೆ ಮಾತ್ರ ಅನಾರೋಗ್ಯವಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅನಾರೋಗ್ಯವಾಗಿದೆ ಎಂದರು. ಪ್ರತ್ಯೇಕ ಧರ್ಮ ಮಾಡಿದರೆ ಕಾಂಗ್ರೆಸ್ ಸೋಲುವ ಭೀತಿ ಎದುರಿಸಬಹುದೆಂಬ ಭಯದಿಂದ ಸಂಪುಟ ಸಭೆ ಮುಂದೂಡಲಾಗಿದೆ ಎಂದು ಈಶ್ವರಪ್ಪ ಟೀಕಿಸಿದರು.

ಎಂ.ಬಿ. ಪಾಟೀಲ್ ಇಂದು ಸಿಹಿ ಸುದ್ದಿ ಕೊಡ್ತೀನಿ ಎಂದಿದ್ದರು. ಆದರೆ ಹೆದರಿಕೊಂಡು ಸಭೆಯನ್ನು ಮುಂದೂಡಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದರು.

Recent Comments

Leave Comments

footer
Top