• 16 October 2018 15:29
Jai Kannada
Jai Kannada
Blog single photo
March 14, 2018

 ನಲಪಾಡ್‌ಗೆ ಜೈಲುವಾಸ ಮುಂದುವರಿಕೆ: ಜಾಮೀನು ಅರ್ಜಿ ವಜಾ 

ಬೆಂಗಳೂರು:  ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಆದೇಶ ನೀಡುವ ಮೂಲಕ ನಲಪಾಡ್ ಜೈಲುವಾಸ ಮುಂದುವರಿದಿದೆ. ಹೈಕೋರ್ಟ್ ಏತಸದಸ್ಯ ಪೀಠ ಈ ಆದೇಶ ನೀಡಿದ್ದು, ತೀರ್ಪು ಪ್ರಕಟವಾದ ಬಳಿಕ ಅವನನ್ನು ಕೊಠಡಿಗೆ ಕರೆದೊಯ್ಯಲಾಯಿತು.

ವಿದ್ವತ್ ಮೇಲೆ ಗಂಭೀರ ಹಲ್ಲೆ ಮಾಡಿದ್ದಾರೆಂದು ನ್ಯಾಯಮೂರ್ತಿಗಳು ಪ್ರಕರಣದ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ವಿದ್ವತ್ ಪರ ವಿಶೇಷ ಅಭಿಯೋಜಕ ಶ್ಯಾಮಸುಂದರ್ ಹೇಳಿಕೆ ನೀಡಿದರು. ಠಾಣೆಯಲ್ಲಿ ಎಫ್‌ಐಆರ್ ದಾಖಲೆ ಕೂಡ ವಿಳಂಬವಾಗಿದೆ. ವಿದ್ವತ್ ಮೇಲೆ ನಲಪಾಡ್ ಜತೆಗಿದ್ದವರು ಹಲ್ಲೆ ನಡೆಸಿದ್ದರು ಎಂದು ಡಿಫೆನ್ಸ್ ವಾದ ಮಂಡಿಸಿದ್ದರು.

ನ್ಯಾಯಾಲಯ ಇವೆಲ್ಲವನ್ನೂ ಗಮನಿಸಿ ಕೇವಲ ಮೂರೇ ಪದಗಳಲ್ಲಿ ಜಾಮೀನಿನ ಬಗ್ಗೆ ತೀರ್ಪು ನೀಡಿತು. ನಲಪಾಡ್‌ಗೆ ಸುಪ್ರೀಂಕೋರ್ಟ್ ಒಂದೇ ಉಳಿದಿರುವ ದಾರಿಯಾಗಿದೆ.
 

Recent Comments

Leave Comments

footer
Top