• 24 March 2019 12:31
Jai Kannada
Jai Kannada
Blog single photo
March 14, 2018

ನಕ್ಸಲರ ಅಟ್ಟಹಾಸಕ್ಕೆ 9 ಯೋಧರ ಬಲಿ 

ರಾಯ್‌ಪುರ: ಛತ್ತೀಸ್‌ಗಢದಲ್ಲಿ ಮತ್ತೆ ನಕ್ಸಲರು ತಮ್ಮ ಅಟ್ಟಹಾಸ ಮೆರೆದಿದ್ದು, 50 ಕೆಜಿಗಳಷ್ಟು ಸ್ಫೋಟಕ ಬಳಸಿ ಯೋಧರು ಪ್ರಯಾಣಿಸುತ್ತಿದ್ದ ವಾಹನ ಧ್ವಂಸಗೊಳಿಸಿದ್ದರಿಂದ 9 ಯೋಧರು ಹುತಾತ್ಮರಾಗಿದ್ದಾರೆ.

ಕಿಸ್ತಾರಾಮ್-ಪಾಲೋಡಿ ರಸ್ತೆಯ ಬಳಿಕ ಮಧ್ಯಾಹ್ನ 12. 30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. 212ನೇ ಬೆಟಾಲಿಯನ್ ಯೋಧರು ಕರ್ತವ್ಯದಲ್ಲಿ ನಿರತರಾಗಿದ್ದಾಗ ಈ ಘಟನೆ ಸಂಭವಿಸಿದೆ.

ಸ್ಫೋಟದ ರಭಸಕ್ಕೆ ವಾಹನವು 10 ಅಡಿ ಎತ್ತರದಷ್ಟು ಹಾರಿ ಭೂಮಿಗೆ ಅಪ್ಪಳಿಸಿದೆ.  ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ನಕ್ಸಲರು ಇದೇ ರೀತಿಯ ದಾಳಿ ನಡೆಸಿದಾಗ 12 ಸಿಆರ್‌ಪಿಎಫ್ ಯೋಧರು ಬಲಿಯಾಗಿದ್ದರು. ಏಪ್ರಿಲ್ 24ರಂದು ಅರೆಸೇನಾಪಡೆಯ 25 ಯೋಧರು ಬಲಿಯಾಗಿದ್ದರು.

Recent Comments

Leave Comments

footer
Top