• 17 December 2018 01:14
Jai Kannada
Jai Kannada
Blog single photo
March 12, 2018

ಪತ್ರಕರ್ತ ರವಿ ಬೆಳೆಗೆರೆ ವಿರುದ್ಧ  ಸಿಸಿಬಿ ಪೊಲೀಸರ ಚಾರ್ಜ್‌ಶೀಟ್

ಬೆಂಗಳೂರು: ರವಿ ಬೆಳಗೆರೆ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ನಿಜವಾಗಲೂ ಸುಪಾರಿ ಕೊಟ್ಟಿದ್ದರೇ?  ರವಿ ಬೆಳಗೆರೆ ತಾವು ಸುಪಾರಿ ಕೊಟ್ಟಿದ್ದನ್ನು ನಿರಾಕರಿಸಿದ್ದರು. ಆದರೆ ಸಿಸಿಬಿ ಪೊಲೀಸರು ಕೋರ್ಟ್‌ಗೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಸುಪಾರಿ ಕೊಟ್ಟಿರುವುದನ್ನು ಉಲ್ಲೇಖಿಸಲಾಗಿದೆ.

ಶಶಿಧರ್ ಮುಂಡೇವಾಡೆ, ವಿಜುಬಡಿಗೇರ್ ಅವರನ್ನು ರವಿ ಬೆಳೆಗೆರೆ ಭೇಟಿ ಮಾಡಿರುವುದನ್ನು ಉಲ್ಲೇಖಿಸಲಾಗಿದೆ. ರವಿ ಬೆಳೆಗೆರೆ ಬಳಿಯಿದ್ದ ಪಿಸ್ತೂಲನ್ನು ಆರೋಪಿಗಳಿಗೆ ನೀಡಿದ್ದಾರೆಂದು ಹೇಳಲಾಗಿದೆ.

ಪತ್ರಕರ್ತ ಸುನಿಲ್ ಹೆಗ್ಗರವಳಿ ಹತ್ಯೆಗೆ ಸುಪಾರಿ ನೀಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಸುಮಾರು 500 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದ್ದು, ತನಿಖೆಯನ್ನು ಪೂರ್ಣಗೊಳಿಸಿದರು. ಪೊಲೀಸರು ಸಾಕ್ಷ್ಯಾಧಾರಗಳ ಸಮೇತ ಒಂದನೇ ಎಸಿಎಂಎಂ ಕೋರ್ಟ್‌ಗೆ ಈ ಆರೋಪಪಟ್ಟಿಯನ್ನು ಸಲ್ಲಿಸಿದರು. ರವಿ ಬೆಳೆಗೆರೆಯಿಂದ ವಶಪಡಿಸಿಕೊಂಡ ಪಿಸ್ತೂಲನ್ನು ಪರಿಶೀಲನೆಗಾಗಿ ರವಾನೆ ಮಾಡಲಾಗಿದೆ.


 

Recent Comments

Leave Comments

footer
Top