• 24 September 2018 11:27
Jai Kannada
Jai Kannada
Blog single photo
March 12, 2018

ಲ್ಯಾಂಡಿಂಗ್ ವೇಳೆ ಅಪಘಾತ: ವಿಮಾನಕ್ಕೆ ಬೆಂಕಿ 

ಕಠ್ಮಂಡು: ನೇಪಾಳದ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ 67 ಪ್ರಯಾಣಿಕರಿದ್ದ ಯುಎಸ್- ಬಾಂಗ್ಲಾ ಏರ್‌ಲೈನ್ಸ್ ವಿಮಾನ ಲ್ಯಾಂಡಿಂಗ್ ಆಗುವ ವೇಳೆ  ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.
ಬೆಂಕಿಹೊತ್ತಿಕೊಂಡ ಕೂಡಲೇ ವಿಮಾನದಲ್ಲಿದ್ದ 17 ಮಂದಿಯನ್ನು ರಕ್ಷಿಸಲಾಗಿದೆ. ಉಳಿದ ಪ್ರಯಾಣಿಕರ ಸ್ಥಿತಿಗತಿಯ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.

ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆಸಲಾಗುತ್ತದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ವಿಡಿಯೊ ಕ್ಲಿಕ್ ಮಾಡಿ 

 

Recent Comments

Leave Comments

footer
Top