• 16 October 2018 16:10
Jai Kannada
Jai Kannada
Blog single photo
March 09, 2018

ಲೋಕಾಯುಕ್ತಕ್ಕೆ ಭದ್ರತೆ : 8 ಪತ್ರಗಳನ್ನು ಕಸದ ಬುಟ್ಟಿಗೆ ಎಸೆದ ಸರ್ಕಾರ 

ಬೆಂಗಳೂರು: ಭದ್ರತೆಯನ್ನು ಹೆಚ್ಚಿಸುವಂತೆ ಮತ್ತು ಪ್ಯಾಟ್ ಡೌನ್ ಪರೀಕ್ಷೆಗಳನ್ನು ಮಾಡುವಂತೆ  ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ 8 ಪತ್ರಗಳನ್ನು ಬರೆದು ಮನವಿ ಮಾಡಿದ್ದರು. 2017ರ ಜನವರಿಯಲ್ಲಿ ಕಳಿಸಿದ ಮೊದಲ ಪತ್ರದಲ್ಲಿ ಲೋಕಾಯುಕ್ತ ಸಂಸ್ಥೆಯು ಭಯೋತ್ಪಾದಕರು ಮತ್ತು ರಾಷ್ಟ್ರವಿರೋಧಿ ಶಕ್ತಿಗಳ ಹದ್ದಿನಕಣ್ಣಿನಲ್ಲಿವೆ ಎಂದು ರಾಜ್ಯ ಮತ್ತು ರಾಷ್ಟ್ರೀಯ ಗುಪ್ತಚರ ಇಲಾಖೆ ಎಚ್ಚರಿಕೆಗಳನ್ನು ಉದಾಹರಿಸಲಾಗಿತ್ತು.

ಕೊನೆಯ ಮೂರು ಪತ್ರಗಳಲ್ಲಿ ಪ್ರವೇಶದಲ್ಲಿ ಅಳವಡಿಸಿದ ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ ನಿಷ್ಕ್ರಿಯವಾಗಿದ್ದು, ಅದನ್ನು ಬದಲಿಸುವ ಅಗತ್ಯವಿದೆ ಎಂದು ಹೇಳಲಾಗಿತ್ತು.  ಆದರೆ ಯಾವುದೇ ಪತ್ರಗಳನ್ನು ಸಂಬಂಧಿಸಿದ ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳಲಿಲ್ಲ.   ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲು ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯದಂತೆ ಇದು ಗೋಚರಿಸುತ್ತದೆ. ಕೆಲವು ಪತ್ರಗಳು ಗೃಹ ಇಲಾಖೆ ಮತ್ತು ನಗರ ಪೊಲೀಸ್ ಆಯುಕ್ತರಿಗೆ ಬರೆದಿದ್ದು, ಯಾವುದೇ ಪತ್ರಕ್ಕೂ ಉತ್ತರವಿರಲಿಲ್ಲ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಲೋಕಾಯುಕ್ತ ಅಧಿಕಾರಿಗಳು ಬರೆದಿದ್ದ ಪತ್ರಗಳನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿರುವುದಕ್ಕೆ ಇದು ಸಾಕ್ಷಿಯಾಗಿದೆ.ಶಸ್ತ್ರಸಜ್ಜಿತ ಆರೋಪಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರಿಗೆ ಚಾಕುವಿನಿಂದ ಇರಿದಿದ್ದು, ಕಚೇರಿಯಲ್ಲಿ ದುರ್ಬಲ ಭದ್ರತೆ ಬಗ್ಗೆ ಗಮನಸೆಳೆದಿತ್ತು. ಆಗ ಮಾತ್ರ ಗೃಹಇಲಾಖೆ ಎಚ್ಚೆತ್ತುಕೊಂಡು ದಡಬಡನೆ ಭದ್ರತೆಗೆ ಎಲ್ಲಾ ವ್ಯವಸ್ಥೆ ಮಾಡುತ್ತಿದೆ.

ಲೋಕಾಯುಕ್ತ ಮುಂತಾದ ಸಂಸ್ಥೆಗೆ ಭದ್ರತೆ ವಿಷಯವನ್ನು ಕಡೆಗಣಿಸಲಾಗಿದೆ ಎಂಬ ಸಂಗತಿ ನೋವಿನದ್ದಾಗಿದೆ. ಭದ್ರತೆ ವ್ಯವಸ್ಥೆಯನ್ನು ಹೆಚ್ಚಿಸಬೇಕೆಂದು ನಾವು 8 ಬಾರಿ ಪತ್ರ ಬರೆಯಬೇಕೇ, ಭದ್ರತೆ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಿರುವುದಿರಲಿ, ಸರ್ಕಾರ ಪರಿಸ್ಥಿತಿಯ ಪರೀಕ್ಷೆಗೆ ಅಧಿಕಾರಿಗಳನ್ನು ಕಳಿಸುವ ಯೋಚನೆ ಮಾಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

Recent Comments

Leave Comments

footer
Top