• 24 March 2019 12:31
Jai Kannada
Jai Kannada
Blog single photo
March 09, 2018

ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕಿಗೆ 5 ಕೋಟಿ ರೂ. ದಂಡ 

 ಮುಂಬೈ: ನಿರ್ವಹಣೆ ಮಾರ್ಗದರ್ಶಿಗಳನ್ನು ಮತ್ತು ನಿಮ್ಮ ಗ್ರಾಹಕರನ್ನು ತಿಳಿಯಿರಿ ನಿಯಮಗಳನ್ನು ಉಲ್ಲಂಘಿಸಿದ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 5 ಕೋಟಿ ರೂ. ದಂಡ ಹಾಕಿದೆ. 

ಗ್ರಾಹಕರ ಸ್ಪಷ್ಟ ಅನುಮತಿಯಿಲ್ಲದೇ ಖಾತೆಗಳನ್ನು ತೆರೆಯುವುದಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ದಾಖಲೆಗಳನ್ನು ಪರಿಶೀಲಿಸಿದ ಆರ್‌ಬಿಐ ಈ ದಂಡ ವಿಧಿಸಿದೆ.

ಬ್ಯಾಂಕ್ ಗ್ರಾಹಕರ ಅನುಮತಿಯಿಲ್ಲದೇ ಗ್ರಾಹಕರ ಖಾತೆಗಳನ್ನು ತೆರೆದಿದೆ ಎಂಬ ದೂರುಗಳನ್ನು ಆಧರಿಸಿ, ಆರ್‌ಬಿಐ ನವೆಂಬರ್ 20-22ರವರೆಗೆ ಬ್ಯಾಂಕಿಗೆ ಮೇಲ್ವಿಚಾರಣೆ ಭೇಟಿಯನ್ನು ಕೈಗೊಂಡಿತ್ತು.

ವರದಿಗಳ ಪ್ರಕಾರ, 23 ಲಕ್ಷಕ್ಕೂ ಹೆಚ್ಚು ಗ್ರಾಹಕರು ತಮ್ಮ ಏರ್ ಟೆಲ್ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 47 ಕೋಟಿ ರೂ. ಜಮೆಯಾಗಿದ್ದನ್ನು ಕಂಡರು. ಏರ್ ಟೆಲ್ ಬ್ಯಾಂಕ್ ಖಾತೆ ಆರಂಭಿಸಿರುವುದೇ ಗ್ರಾಹಕರಿಗೆ ಗೊತ್ತಿರಲಿಲ್ಲ.
 

Recent Comments

Leave Comments

footer
Top