• 17 December 2018 01:55
Jai Kannada
Jai Kannada
Blog single photo
March 09, 2018

ತಿರುಚಿದ ವರದಿ ಬರೆದ ವೈದ್ಯರು: ಪ್ರಾಸಿಕ್ಯೂಷನ್ ಆರೋಪ 

ಬೆಂಗಳೂರು: ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ಹಲ್ಲೆ ಮಾಡಿದ ಘಟನೆ ಕುರಿತು ಜೈಲಿನಲ್ಲಿರುವ ನಲಪಾಡ್  ಜಾಮೀನು ಅರ್ಜಿ ವಿಚಾರಣೆ ಮಾ. 12ಕ್ಕೆ ಮುಂದೂಡಲಾಗಿದೆ. ಆರಂಭದಲ್ಲಿ ವೈದ್ಯರು ಕೊಟ್ಟಂತಹ ವರದಿಯಲ್ಲಿ ಗಂಭೀರ ಗಾಯಗಳಾದ ಬಗ್ಗೆ ತಿಳಿಸಲಾಗಿತ್ತು. ಘಟನೆ ನಡೆದ ನಂತರ ವೈದ್ಯರ ವರದಿಯಲ್ಲಿ 8 ಮೂಳೆಗಳು ಮುರಿದಿರುವ ಬಗ್ಗೆ ಮಾಹಿತಿ ನೀಡಿದ್ದರು.

ಈಗ ವಿದ್ವತ್ ಬಿಡುಗಡೆಯಾದ ಮೇಲೆ ವೈದ್ಯರು ನೀಡಿದ ವರದಿಯ ಬಗ್ಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪ ಸಲ್ಲಿಸಿದರು. ಮುಂಚಿನ ವರದಿಯೂ, ಈಗ ಕೊಟ್ಟ ವರದಿಯೂ ತದ್ವಿರುದ್ಧವಾಗಿತ್ತು.  ಬಹುಶಃ ವೈದ್ಯರಿಗೆ ಜೀವಬೆದರಿಕೆ ಹಾಕಿದ್ದರಿಂದ ವೈದ್ಯರು ತಿರುಚಿದ ವರದಿ ನೀಡಿದ್ದಾರೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದಿಸಿದರು.

ಜೈಲಿನಲ್ಲಿರುವಾಗಲೇ ಪ್ರಭಾವ ಬೀರಲು ಶಕ್ತನಾದ ನಲಪಾಡ್ ಇನ್ನು ಜೈಲಿಂದ ಬಿಡುಗಡೆಯಾದರೆ ಗತಿಯೇನು ಎಂದು ಪ್ರಾಸಿಕ್ಯೂಟರ್ ಪ್ರಶ್ನಿಸಿದರು. ನಲಪಾಡ್ ಪರ ವಕೀಲ ನಾಗೇಶ್ ವಾದ ಮಂಡಿಸಿದರು. ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮಾ. 12ಕ್ಕೆ ಮುಂದೂಡಿದರು.

 

Recent Comments

Leave Comments

footer
Top