• 17 December 2018 02:05
Jai Kannada
Jai Kannada
Blog single photo
March 09, 2018

ಕೌಟುಂಬಿಕ ಹಿಂಸಾಚಾರ: ಶಮಿ ವಿರುದ್ಧ ಎಫ್‌ಐಆರ್

ಕೋಲ್ಕತಾ: ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ  ವಿರುದ್ಧ ಅವರ ಪತ್ನಿ ಲಿಖಿತ ದೂರು ನೀಡಿದ್ದರಿಂದ ಶುಕ್ರವಾರ ಎಫ್‌ಐಆರ್ ದಾಖಲು ಮಾಡಲಾಗಿದೆ. ಕೋಲ್ಕತಾದ ಜಾದವಪುರ ಪೊಲೀಸ್ ಠಾಣೆಯಲ್ಲಿ ಶಮಿ ಮತ್ತು ಅವರ ಕುಟುಂಬದ ಇನ್ನೂ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಮಹಿಳೆಯ ವಿರುದ್ಧ ಪತಿ ಮತ್ತು ಅವರ ಸಂಬಂಧಿಗಳ ಕ್ರೌರ್ಯ ಸೇರಿದಂತೆ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಎಫ್ಐಆರ್ ದಾಖಲಿಸಲಾಗಿದೆ.

ಶಮಿ ತನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸುತ್ತಿದ್ದಾನೆ ಮತ್ತು ಅನೇಕ ಅನೈತಿಕ ಸಂಬಂಧಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪತ್ನಿ ಹಸೀನ್ ಜಹಾನ್ ಆರೋಪಿಸಿದ್ದಳು. ಆದಾಗ್ಯೂ ಶಮಿ ಮಾತ್ರ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದು, ಪತ್ನಿಯನ್ನು ಯಾರೋ ದಾರಿತಪ್ಪಿಸಿದ್ದಾರೆಂದು ಹೇಳಿದ್ದಾನೆ.
 

Recent Comments

Leave Comments

footer
Top