• 24 March 2019 13:10
Jai Kannada
Jai Kannada
Blog single photo
March 09, 2018

ನೈಸ್ ರಸ್ತೆಯಲ್ಲಿ ಕಾರು ಅಪಘಾತಕ್ಕೆ ಮೂವರ ಬಲಿ 

.
ಬೆಂಗಳೂರು: ನೈಸ್ ರಸ್ತೆಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೂವರು ಎಂಬಿಎ ವಿದ್ಯಾರ್ಥಿನಿಯರು ದಾರುಣ ಸಾವಿಗೀಡಾದ ಘಟನೆ ಸಂಭವಿಸಿದೆ. ಕೊಪ್ಪ ಗೇಟ್ ಬಳಿಯ ನೈಸ್ ರಸ್ತೆ ಬ್ರಿಡ್ಜ್ ಕೆಳಗೆ ಈ ಅಪಘಾತ ಸಂಭವಿಸಿದ್ದು, ಆನೇಕಲ್ ಅಲೈಯನ್ಸ್ ಕಾಲೇಜಿನ ಹರ್ಷ ಶ್ರೀವಾಸ್ತವ, ಆಶ್ರಯ ಮತ್ತು ಶ್ರುತಿ ಎಂಬ ಮೂವರು ವಿದ್ಯಾರ್ಥಿನಿಯರು ಸಾವಿಗೀಡಾಗಿದ್ದಾರೆ.

ಪ್ರವೀಣ್ ಮತ್ತು ಪವಿತ್ ಕೊಹ್ಲಿ ಎಂಬ ಇನ್ನಿಬ್ಬರು ವಿದ್ಯಾರ್ಥಿನಿಯರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ.

 ಕಾರಿನಲ್ಲಿ ಜಾರ್ಖಂಡ್ ಮತ್ತು ಕೇರಳ ಮೂಲದ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ತೆರಳಿ ಹಿಂತಿರುಗುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಉರುಳಿದ್ದರಿಂದ ಮೂವರ ಜೀವ ಬಲಿಯಾಗಿದೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recent Comments

Leave Comments

footer
Top