• 17 January 2019 20:39
Jai Kannada
Jai Kannada
Blog single photo
March 08, 2018

ವೆಂಗ್‌ಸರ್ಕಾರ್ ರಿಸ್ಕ್‌ ತೆಗೆದುಕೊಂಡು ಕೊಹ್ಲಿಗೆ ಛಾನ್ಸ್ ಕೊಟ್ಟರು

ಮುಂಬೈ: ಅಂದು  ವೆಂಗ್‌ಸರ್ಕಾರ್ ರಿಸ್ಕ್ ತೆಗೆದುಕೊಳ್ಳದಿದ್ದರೆ ವಿರಾಟ್ ಕೊಹ್ಲಿಯಂತ ಅದ್ಭುತ ಆಟಗಾರ ಟೀಂ ಇಂಡಿಯಾಗೆ ಸಿಗುತ್ತಿರಲಿಲ್ಲ.  ಕೊಹ್ಲಿ ಆಯ್ಕೆಗೆ ಶ್ರೀನಿವಾಸನ್ ವಿರೋಧ ವ್ಯಕ್ತಪಡಿಸಿದ್ದರು. 2008ರ ಭಾರತೀಯ ಕ್ರಿಕೆಟ್ ದಿನಗಳು

. ಲಂಕಾ ಪ್ರವಾಸದ ಮೂಲಕ ವಿರಾಟ್ ಎಂಟ್ರಿ ಕೊಟ್ಟಿದ್ದರು. ಶ್ರೀನಿವಾಸನ್ ಆಗ ಬಿಸಿಸಿಐ ಖಜಾಂಚಿಯಾಗಿದ್ದರು. ಕೊಹ್ಲಿ ಬದಲಿಗೆ ಬದ್ರಿನಾಥ್ ಆಯ್ಕೆ ಮಾಡಬೇಕೆಂದು ಶ್ರೀನಿವಾಸನ್ ಶಿಫಾರಸು ಮಾಡಿದ್ದರು.

ಆದರೆ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ  ವೆಂಗ್‌ಸರ್ಕಾರ್ ಕೊಹ್ಲಿ ಆಯ್ಕೆಯನ್ನು ಮಾಡಿದ್ದು ಶ್ರೀನಿವಾಸನ್‌ಗೆ ಕೋಪ ತರಿಸಿತ್ತು. ಬಿಸಿಸಿಐ ಅಧ್ಯಕ್ಷ ಶರದ್ ಪವಾರ್‌ಗೆ ಶ್ರೀನಿವಾಸನ್ ದೂರು ನೀಡಿದರು. ಇದಾದ ಬಳಿಕ ವೆಂಗ್‌ಸರ್ಕಾರ್ ಅವರನ್ನು ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನದಿಂದ ತೆಗೆಯಲಾಗಿತ್ತು. 

Recent Comments

Leave Comments

footer
Top