Jai Kannada
Jai Kannada
Blog single photo
March 08, 2018

 ಲೋಕಾಯುಕ್ತರಿಗೆ ಚಾಕು ಇರಿತ: ಸಮಯಪ್ರಜ್ಞೆ ತೋರಿಸಿದ ಜಾಮದಾರ್ 

 ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರಿಗೆ ಆರೋಪಿ ಚಾಕುವಿನಿಂದ ಇರಿದ ಕೂಡಲೇ ಲೋಕಾಯುಕ್ತ ಸಂಸ್ಥೆಯಲ್ಲಿ ಕೆಲಸ ಮಾಡುವ ಜಾಮದಾರ್ ತಮ್ಮ ಸಮಯಪ್ರಜ್ಞೆಯಿಂದ ಆರೋಪಿಯನ್ನು ಹಿಡಿಯುವಲ್ಲಿ ನೆರವಾಗಿದ್ದಾರೆ ಮತ್ತು  ನ್ಯಾಯಮೂರ್ತಿಗಳಿಗೆ ತಕ್ಷಣವೇ ಚಿಕಿತ್ಸೆ ಕೊಡಿಸಲು ನೆರವಾಗಿದ್ದಾರೆ. ಜಾಮದಾರ್ ಆರೋಪಿ ತೇಜರಾಜ್‌ನನ್ನು ಕೊಠಡಿಯೊಳಕ್ಕೆ ಕೂಡಿಹಾಕಿ ಹೊರಗಿಂದ ಲಾಕ್ ಮಾಡಿ ತಪ್ಪಿಸಿಕೊಂಡು ಹೋಗದಂತೆ ತಡೆದರು.  ಜಾಮದಾರ್ ನ್ಯಾಯಮೂರ್ತಿಗಳನ್ನು ಭೇಟಿ ಮಾಡಲು ಬರುವ ವಿಸಿಟರ್ಸ್ ಚೀಟಿ ತಂದುಕೊಟ್ಟು ಅವರು ಒಪ್ಪಿಗೆ ಇತ್ತ ಬಳಿಕ ಭೇಟಿಗೆ ಅವಕಾಶ ನೀಡುತ್ತಿದ್ದರು.

ಮಧ್ಯಾಹ್ನ ಸುಮಾರು 1.40ಕ್ಕೆ ಆರೋಪಿ ನ್ಯಾಯಮೂರ್ತಿ ಭೇಟಿಗೆ ಬಂದಿದ್ದಾನೆ. ಆತ ಒಳಕ್ಕೆ ಹೋದ ಕೆಲವೇ ಕ್ಷಣಗಳಲ್ಲಿ ಜೋರಾಗಿ ಕಿರುಚಿಕೊಂಡಿದ್ದು ಕೇಳಿಸಿ ಜಾಮದಾರ್  ಒಳಬಂದು ನೋಡಿದಾಗ ನ್ಯಾಯಮೂರ್ತಿಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಭದ್ರತಾ ಸಿಬ್ಬಂದಿಗೆ ಅಲರಾಂ ಹೊಡೆದು ತಿಳಿಸಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ನ್ಯಾಯಮೂರ್ತಿಗಳನ್ನು ವೀಲ್ ಚೇರ್‌‌ನಲ್ಲಿ ಕೂರಿಸಿಕೊಂಡು ಹೊರಕ್ಕೆ ತಂದಿದ್ದಲ್ಲದೇ ಆರೋಪಿಯನ್ನು ಕೊಠಡಿಯಲ್ಲಿ ಕೂಡಿಹಾಕುವ ಮೂಲಕ ಸಮಯಪ್ರಜ್ಞೆ ಮೆರೆದರು. ಇದರಿಂದ ನ್ಯಾಯಮೂರ್ತಿಗಳ ಜೀವವುಳಿಸಲು ಸಾಧ್ಯವಾಯಿತು. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Recent Comments

Leave Comments

footer
Top