Jai Kannada
Jai Kannada
Blog single photo
March 08, 2018

ಲೋಕಾಯುಕ್ತರಿಗೆ ಚೂರಿ ಇರಿತ: ರಾಜೀನಾಮೆ ನೀಡಲು ರಾಮಲಿಂಗಾರೆಡ್ಡಿ ನಕಾರ 

ಬೆಂಗಳೂರು: ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಮೇಲೆ ಚಾಕು ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷದ ಒತ್ತಡಕ್ಕೆ ಮಣಿಯದ ಗೃಹಸಚಿವರು ತಾವು ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಮೆಟಲ್ ಡಿಟೆಕ್ಟರ್ ದೋಷದಿಂದ ಆರೋಪಿಯ ಜತೆಗಿದ್ದ ಚಾಕು ಪತ್ತೆಯಾಗಿಲ್ಲ. ಭದ್ರತೆಯ ಲೋಪಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಈ ಘಟನೆಯಲ್ಲಿ ನನ್ನನ್ನು ತಪ್ಪಿತಸ್ಥನನ್ನಾಗಿ ಮಾಡುವುದು ಸರಿಯಲ್ಲ. ಇನ್ನು ಮುಂದೆ ವಿಧಾನಸೌಧ, ಹೈಕೋರ್ಟ್ ಮತ್ತು ಲೋಕಾಯುಕ್ತಕ್ಕೆ ಪಾರ್ಲಿಮೆಂಟ್ ಮಾದರಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗುತ್ತದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ಬಿಜೆಪಿ ಆಡಳಿತದಲ್ಲಿ ಏನೇನು ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಲೋಕಾಯುಕ್ತದೊಂದಿಗೆ ಈತ ಮುಂಚೆಯುೂ ಜಗಳವಾಡಿದ್ದ. ಲೋಕಾಯುಕ್ತರ ಒಳ್ಳೆಯ ಸ್ವಭಾವವನ್ನು ಅವನು ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

Recent Comments

Leave Comments

footer
Top