• 19 October 2018 12:22
Jai Kannada
Jai Kannada
Blog single photo
November 30, -0001

ಸುಂದರ್ ಗೌಡ ಕುಟುಂಬ 3 ಕಾರುಗಳಲ್ಲಿ ಎಸ್ಕೇಪ್ 

ಮೈಸೂರು: ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಜತೆ ಶಾಸಕರ ಪುತ್ರಿಯ ವಿವಾಹ ಪ್ರಕರಣದಲ್ಲಿ ಸುಂದರ್ ಸಂಬಂಧಿಕರು ಮೈಸೂರಿನ ರೆಸಾರ್ಟ್‌ನಿಂದ ಪರಾರಿಯಾಗಿದ್ದಾರೆ.  3 ಕಾರುಗಳಲ್ಲಿ ರೆಸಾರ್ಟ್‌ನಿಂದ ಹೊರಟು ಕಾಲ್ಕಿತ್ತಿದ್ದಾರೆ. ಬೆಳಿಗ್ಗೆಯಿಂದರೂ ಸುಂದರ್ ಸಂಬಂಧಿಕರು ಪೊಲೀಸರ ದಿಗ್ಭಂಧನದಲ್ಲಿದ್ದರು.

ಮಾಸ್ತಿಗುಡಿಯ ಸುಂದರ್ ಗೌಡ ಅವರು ಶಾಸಕ ಶಿವಮೂರ್ತಿ ನಾಯಕ್ ಪುತ್ರಿ ಲಕ್ಷ್ಮಿನಾಯಕ್ ಅವರನ್ನು ಪ್ರೇಮವಿವಾಹವಾಗಿದ್ದರು. ವಿವಾಹಕ್ಕೆ ಮುಂಚೆ ಲಕ್ಷ್ಮಿ ಇದ್ದಕ್ಕಿದ್ದಂತೆ ಮನೆಯಿಂದ ಕಾಣೆಯಾಗಿದ್ದರಿಂದ ಶಾಸಕರು ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದರು.

ಇದಾದ ಕೆಲವೇ ದಿನಗಳ ಬಳಿಕ ಸುಂದರ್ ಗೌಡ ಮತ್ತು ಲಕ್ಷ್ಮಿ ಮೈಸೂರಿನ ರೆಸಾರ್ಟ್‌ವೊಂದರಲ್ಲಿ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಈ ವಿವಾಹಕ್ಕೆ ಸುಂದರ್ ಗೌಡ ಕುಟುಂಬದವರು ಸಹಕರಿಸಿದ್ದರು.

Recent Comments

Leave Comments

footer
Top