• 16 October 2018 16:33
Jai Kannada
Jai Kannada
Blog single photo
March 07, 2018

ವಿಧಾನಸೌಧ, ಲೋಕಾಯುಕ್ತ, ಹೈಕೋರ್ಟ್‌ಗೆ ಪಾರ್ಲಿಮೆಂಟ್ ಮಾದರಿ ಭದ್ರತೆ 

ಬೆಂಗಳೂರು: ಲೋಕಾಯುಕ್ತ ಕಚೇರಿಯಲ್ಲಿ ಚಾಕು ಇರಿತದ ಪ್ರಕರಣ ಸಂಭವಿಸಿದ ಬಳಿಕ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ. ಅವರಿಗೆ ಧ್ರವ ಅಥವಾ ಘನ ಆಹಾರವನ್ನು ನೀಡಲಾಗುತ್ತಿಲ್ಲ.

 ಒಂದು ವಾರದ ಕಾಲ ಅವರಿಗೆ ಐಸಿಯು ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಗೆ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.

ಲೋಕಾಯುಕ್ತರ ಮೇಲೆ ಚಾಕು ಇರಿತದ ಪ್ರಕರಣ ಸಂಭವಿಸಿದ ಬಳಿಕ ಗೃಹ ಸಚಿವ ರಾಮಲಿಂಗಾ ರೆಡ್ಡಿ ಎಚ್ಚೆತ್ತುಕೊಂಡಿದ್ದಾರೆ. ವಿಧಾನಸೌಧ, ಹೈಕೋರ್ಟ್, ಲೋಕಾಯುಕ್ತ, ವಿಕಾಸಸೌಧ ವಿವಿಧ ಕಚೇರಿಗಳಿಗೆ ಪಾರ್ಲಿಮೆಂಟ್ ಮಾದರಿಯ ಭದ್ರತೆಯನ್ನು ನೀಡಲಾಗುತ್ತದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

Recent Comments

Leave Comments

footer
Top