• 16 October 2018 15:36
Jai Kannada
Jai Kannada
Blog single photo
March 07, 2018

ಮಲಗಿದ್ದ ಮೂವರ ಮೈಮೇಲೆ ನಡೆದುಕೊಂಡು ಹೋದ ಆನೆ 

ಪುತ್ತೂರು: ಪುತ್ತೂರಿನ ಕೊಂಬಾರು ಗ್ರಾಮದ ಬಳಿ ಷೆಡ್ ಹೊರಗೆ  ಮಲಗಿದ್ದ ಮೂವರ ಮೇಲೆ ಆನೆ ನಡೆದುಕೊಂಡುಹೋಗಿದ್ದರಿಂದ ತಮಿಳುನಾಡು ಮೂಲದ ರಂಜಿತ್ ಕುಮಾರ್ ಮೃತಪಟ್ಟಿದ್ದಾನೆ.

ಇನ್ನಿಬ್ಬರು ಗಾಯಗಳಿಂದ ಆಸ್ಪತ್ರೆ ಸೇರಿದ್ದಾರೆ. ರೈಲ್ವೆ ಬ್ರಿಡ್ಜ್ ಕಾಮಗಾರಿಗಾಗಿ ಬಂದಿದ್ದ ಕಾರ್ಮಿಕರು ಷೆಡ್‌ನಲ್ಲಿ ಸೆಕೆಯಾಗುತ್ತದೆಂದು ಷೆಡ್ ಹೊರಗೆ ಮಲಗಿದ್ದರು.

ಆದರೆ ಅವರ ದುರಾದೃಷ್ಟಕ್ಕೆ ಆ ದಾರಿಯಲ್ಲಿ ಬಂದ ಕಾಡಾನೆ ಅವರನ್ನು ತುಳಿದುಕೊಂಡೇ ಮುಂದೇ ಸಾಗಿದ್ದರಿಂದ ರಂಜಿತ್ ಕುಮಾರ್ ಕಾಡಾನೆ ತುಳಿತಕ್ಕೆ ಸಿಕ್ಕಿ ಅಪ್ಪಚ್ಚಿಯಾಗಿದ್ದಾನೆ. ಉಳಿದಿಬ್ಬರಿಗೆ ಗಾಯಗಳಾಗಿದ್ದು ಆಸ್ಪತ್ರೆ ಸೇರಿದ್ದಾರೆ.

Recent Comments

Leave Comments

footer
Top