Jai Kannada
Jai Kannada
Blog single photo
March 07, 2018

ಹೊಲದಲ್ಲಿ ಕಾಣಿಸಿಕೊಂಡ ಮೊಸಳೆ: ರೈತರಿಗೆ ಆತಂಕ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಅನಗವಾಡಿ ಗ್ರಾಮದಲ್ಲಿ 8 ಅಡಿ ಉದ್ದದ ಭಾರೀ ಗಾತ್ರದ ಮೊಸಳೆಯು ರೈತರ ಹೊಲವೊಂದರಲ್ಲಿ ಕಾಣಿಸಿಕೊಂಡಿದೆ. ರೈತರ ಹೊಲಕ್ಕೆ ಮೊಸಳೆ ನುಗ್ಗಿದ್ದರಿಂದ ರೈತರು ಆತಂಕಗೊಂಡಿದ್ದಾರೆ. ಭಾರೀ ಗಾತ್ರದ ಮೊಸಳೆ ಕಂಡು ರೈತರು ಕಂಗಾಲಾಗಿದ್ದಾರೆ.

ರಮೇಶ್ ಮತ್ತು ಇನ್ನಿಬ್ಬರು ಎಂದಿನಂತೆ ಹೊಲಕ್ಕೆ ಹೋಗಿದ್ದಾಗ ಮುಳ್ಳಿನ ಕಂಟಿಯಲ್ಲಿ ಮೊಸಳೆ ಕಂಡು ದಿಗ್ಭ್ರಾಂತರಾದರು. ಹೊಲಕ್ಕೆ ಒಂದು ಕಿಮೀ ದೂರದಲ್ಲಿ ಘಟಪ್ರಭಾ ನದಿಯಿದ್ದು ಅಲ್ಲಿಂದ ಮೊಸಳೆ ಬಂದಿದೆಯೆಂದು ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ಈ ಮೊಸಳೆಗಳು ಹೊಲಕ್ಕೆ ಬರುತ್ತವೆಂದು ಹೇಳಲಾಗುತ್ತಿದೆ.

Recent Comments

Leave Comments

footer
Top