• 14 December 2018 17:55
Jai Kannada
Jai Kannada
Blog single photo
March 01, 2018

ಹೋಳಿ ಬಣ್ಣಗಳಿಂದ ಚರ್ಮವನ್ನು ರಕ್ಷಿಸುವುದು ಹೇಗೆ?

ಬಣ್ಣದ ಹಬ್ಬ ಹೋಳಿ ಅತ್ಯಂತ ಸಂತಸದ ಹಬ್ಬಗಳಲ್ಲಿ ಒಂದಾಗಿದೆ. ಮೈಗೆ ಬಣ್ಣಗಳನ್ನು ಎರಚುವ ಮೂಲಕ ಆಚರಿಸುವ ಈ ಹಬ್ಬವು ನಿಮ್ಮ ಚರ್ಮ ಮತ್ತು ಕೂದಲಿಗೆ ಮಾರಕವಾಗಬಹುದು. ಕೆಲವು ಘಾಸಿಗೊಳಿಸುವ ಬಣ್ಣಗಳು ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ ಎಡೆಮಾಡಬಹುದು. ಹೋಳಿಯ ಸಂಭ್ರಮದ ಕ್ಷಣಗಳೊಂದಿಗೆ ಆಚರಣೆಯ ಬಳಿಕ ನಿಮ್ಮ ಚರ್ಮವನ್ನು ರಕ್ಷಿಸುವುದು ಕೂಡ ಮುಖ್ಯವಾಗಿದೆ.
 ಹೋಳಿಗೆ ಮುಂಚೆ
ನಿಮ್ಮ ಮುಖಕ್ಕೆ ಮತ್ತು ಚರ್ಮದ ತೆರೆದ ಭಾಗಕ್ಕೆ ತೈಲವನ್ನು ಹಚ್ಚಿರಿ. ತೆಂಗಿನೆಣ್ಣೆ ಅಥವಾ ಬಾದಾಮಿ ತೈಲವು ಬಣ್ಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸುತ್ತದೆ.

 ಮುಖಕ್ಕೆ ಸನ್‌ಸ್ಕ್ರೀನ್ ಹಚ್ಚುವುದನ್ನು ಮರೆಯಬೇಡಿ. ಇದು ತಡೆಗೋಡೆಯಂತೆ ಕಾರ್ಯನಿರ್ವಹಿಸಿ ಹಾನಿಯಿಂದ ನಿಮ್ಮ ಚರ್ಮವನ್ನು ರಕ್ಷಿಸುತ್ತದೆ.

ನಿಮ್ಮ ಉಗುರುಗಳ ರಕ್ಷಣೆಗೆ ಬೇಸ್ ಕೋಟ್ ಅಥವಾ ನೈಲ್ ಪಾಲಿಷ್ ಹಚ್ಚಿರಿ. ಇದರಿಂದ ಉಗುರು ಬಣ್ಣಗೆಡುವುದಿಲ್ಲ. ಕಣ್ಣುಗಳನ್ನು ರಕ್ಷಿಸಲು ಸನ್ ಗ್ಲಾಸ್‌ಗಳನ್ನು ಧರಿಸಿರಿ. 

ಮುಖಕ್ಕೆ ತೈಲ ಹಚ್ಚಿದ ರೀತಿಯಲ್ಲಿ ನಿಮ್ಮ ಕೂದಲಿಗೆ ಕೂಡ ತೈಲವನ್ನು ಹಚ್ಚಿರಿ. ಹೋಳಿಯನ್ನು ಆಡುವಾಗ ಕೂದಲನ್ನು ಮುಕ್ತವಾಗಿ ತೆರೆದಿಡಬೇಡಿ. ಪೋನಿಟೇಲ್ ಅಥವಾ ತಲೆಯನ್ನು ಕಟ್ಟುವ ಮೂಲಕ ಕೂದಲನ್ನು ರಕ್ಷಿಸಿ.
ನಿಮ್ಮ ನೆತ್ತಿಯ ಭಾಗ ಸೂಕ್ಷ್ಮವಾಗಿದ್ದರೆ, ಲಿಂಬೆ ರಸದ ಕೆಲವು ಹನಿಗಳನ್ನು ಹಾಕಿರಿ, ವಿಷಕಾರಿ ಬಣ್ಣಗಳಿಂದ ಉಂಟಾಗುವ ಸೋಂಕಿನಿಂದ ಇದು ರಕ್ಷಣೆ ನೀಡುತ್ತದೆ.
ಹೋಳಿಯ ಬಳಿಕ ಚರ್ಮದ ಆರೈಕೆ
ಬಣ್ಣಗಳು ಒದ್ದೆಯಿರುವಾಗಲೇ ತೆಗೆಯುವುದು ಒಳ್ಳೆಯದು. ನೀವು ಮನೆಗೆ ಹೋದ ಕೂಡಲೇ ಸ್ನಾನ ಮಾಡಿ.
ನಿಮ್ಮ ಮುಖಕ್ಕೆ ಬೆಚ್ಚಗಿನ ನೀರಿನಿಂದ ಬಣ್ಣಗಳನ್ನು ತೊಳೆಯಬೇಕು. ಉಪ್ಪು, ಗ್ಲಿಸರಿನ್ ಮತ್ತು ಸುಗಂಧ ತೈಲದ ಕೆಲವು ಹನಿಗಳ ಮಿಶ್ರಣವನ್ನು ನೀವು ಬಳಸಬಹುದು.
 ಬಣ್ಣಗಳನ್ನು ತೆಗೆಯುವಾಗ ನಿಮ್ಮ ಚರ್ಮವನ್ನು ತುಂಬಾ ಉಜ್ಜುವುದರಿಂದ ಚರ್ಮಕ್ಕೆ ಹಾನಿಯಾಗಬಹುದು. ಬದಲಿಗೆ ಬಣ್ಣಗಳನ್ನು ತೆಗೆಯಲು ತೈಲವನ್ನು ಬಳಸಿ.
................................

Recent Comments

Leave Comments

footer
Top