Jai Kannada
Jai Kannada
Blog single photo
February 19, 2018

ಅನುಷ್ಠಾನಕ್ಕೆ ಸಾಧ್ಯವಾಗದ ಘೋಷಣೆ ಮಾಡಿದ ಸಿದ್ದರಾಮಯ್ಯ: ಬಿಎಸ್‌ವೈ

ಮೈಸೂರು: ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ಸಡಗರ, ಸಂಭ್ರಮ ಮನೆಮಾಡಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬಿಜೆಪಿ ಮುಖಂಡ ಯಡಿಯೂರಪ್ಪ ಶಾಲು ಹೊದಿಸಿ ಅಭಿನಂದಿಸಿದರು. ಅಂದು ಎಲ್ಲಾ ಬಿಜೆಪಿ ಮುಖಂಡರು ಅಲ್ಲಿ ಕಲೆತಿದ್ದರು. ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿಗೆ ನಿಮ್ಮನ್ನು ಸ್ವಾಗತಿಸುತ್ತೇವೆ ಎಂದು ಪ್ರಧಾನಿ ಮೋದಿಯವರನ್ನು ಸ್ವಾಗತಿಸುತ್ತಾ ಮೊದಲಿಗೆ ಭಾಷಣ ಮಾಡಿದ ಬಿಜೆಪಿ ನಾಯಕ ಯಡಿಯೂರಪ್ಪ ಹೇಳಿದರು.

ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿ ಪಥದಲ್ಲಿ ಸಾಗಿದೆ. 50 ಕೋಟಿ ಜನರಿಗೆ ಆರೋಗ್ಯ ವಿಮೆ ಸುರಕ್ಷತೆಯನ್ನು ಪ್ರಧಾನಿ ನೀಡಿದ್ದಾರೆ. ನಮ್ಮ ಪರಿವರ್ತನಾ ಯಾತ್ರೆಯ ಸಂದರ್ಭದಲ್ಲಿ ಮೋದಿಯವರ ಬಗ್ಗೆ ಮಹಿಳೆಯರು,ಪುರುಷರು ಪ್ರೀತಿ ವ್ಯಕ್ತಪಡಿಸಿದ್ದನ್ನು ಕಂಡಿದ್ದೇನೆ. ಜನರ ಮೂಗಿಗೆ ತುಪ್ಪ ಸವರಲು ಅನುಷ್ಠಾನ ಮಾಡಲಾಗದ ಘೋಷಣೆಗಳನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ.

ಲೋಕಾಯುಕ್ತವನ್ನು ದುರ್ಬಲಗೊಳಿಸಿದೆ. ಮರಳು ಮಾಫಿಯಾಗೆ ಸರ್ಕಾರ ತನ್ನನ್ನು ಮಾರಿಕೊಂಡಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದೀರಲ್ಲಾ ಇದಕ್ಕೆ ಏನು ಹೇಳುತ್ತೀರಾ? ಎಂದು ಯಡಿಯೂರಪ್ಪ ಪ್ರಶ್ನಿಸಿದರು.

Recent Comments

Leave Comments

footer
Top