• 17 January 2019 21:22
Jai Kannada
Jai Kannada
Blog single photo
February 19, 2018

ಭುವನೇಶ್ವರ್ 5 ವಿಕೆಟ್: ಟಿ ಟ್ವೆಂಟಿಯಲ್ಲಿ ಭಾರತಕ್ಕೆ ಜಯ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮೊದಲ ಟಿ 20 ಪಂದ್ಯದಲ್ಲಿ ಚೊಚ್ಚಲ 5 ವಿಕೆಟ್ ಗಳಿಸುವ ಮೂಲಕ ಭುವನೇಶ್ವರ್ ಕುಮಾರ್ ಮೊದಲ ಭಾರತೀಯ ವೇಗಿ ಎನಿಸಿದರು.

ಭಾರತ ಮೊದಲ ಬ್ಯಾಟಿಂಗ್‌ನಲ್ಲಿ 203ಕ್ಕೆ 5 ವಿಕೆಟ್ ಗಳಿಸಿ, ಆತಿಥೇಯರನ್ನು 9 ವಿಕೆಟ್‌ಗೆ 175ಕ್ಕೆ ನಿರ್ಬಂಧಿಸುವ ಮೂಲಕ ಜಯಗಳಿಸಿತು. ಭುವನೇಶ್ವರ್ 24 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಭುವನೇಶ್ವರ್ 5 ವಿಕೆಟ್‌ಗಳ ಪೈಕಿ 3 ವಿಕೆಟ್‌ಗಳನ್ನು  ತಮ್ಮ ಕೊನೆಯ ಓವರಿನಲ್ಲಿ ಕಬಳಿಸಿದರು.

ಒಟ್ಟಾರೆಯಾಗಿ, ಭಾರತ 6 ಎಸೆತಗಳಲ್ಲಿ ರನ್ ಔಟ್ ಸೇರಿದಂತೆ 4 ವಿಕೆಟ್ ಗಳಿಸಿತು. ಭುವನೇಶ್ವರ್ ಹೆಂಡ್ರಿಕ್ಸ್, ಕ್ಲಾಸನ್, ಕ್ರಿಸ್ ಮೋರಿಸ್ ಅವರ ವಿಕೆಟ್ ಕಬಳಿಸಿದ ಬಳಿಕ ದ.ಆಫ್ರಿಕಾ ಗೆಲ್ಲುವ ಆಸೆ ಕಮರಿತು.
ಸ್ಕೋರ್ ವಿವರ
ಭಾರತ ಶಿಖರ್ ಧವನ್ 72, ರೋಹಿತ್ ಶರ್ಮಾ  21, ವಿರಾಟ್ ಕೊಹ್ಲಿ 26 ಒಟ್ಟು 5 ವಿಕೆಟ್ ನಷ್ಟಕ್ಕೆ 203
 ದ.ಆಫ್ರಿಕಾ:  9 ವಿಕೆಟ್ ನಷ್ಟಕ್ಕೆ 175 ರನ್
 ಭುವನೇಶ್ವರ್ ಕುಮಾರ್ 5 ವಿಕೆಟ್ 
 

Recent Comments

Leave Comments

footer
Top