• 17 January 2019 21:05
Jai Kannada
Jai Kannada
Blog single photo
February 18, 2018

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಶರಣಾದ ನಲಪಾಡ್

ಬೆಂಗಳೂರು: ಹ್ಯಾರಿಸ್ ಪುತ್ರ ನಲಪಾಡ್ ಅವರು  ಹಲ್ಲೆ  ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ನಲಪಾಡ್ ಇಂದು ಕಬ್ಬನ್ ಪಾರ್ಕ್ ಠಾಣೆಗೆ  ಆಗಮಿಸಿ ತಾವೇ ಶರಣಾಗಿದ್ದಾರೆ. 37 ಗಂಟೆಗಳಿಂದ ಹುಡುಕಾಟ ನಡೆಸಿದರೂ ನಲಪಾಡ್‌ನನ್ನು ಹಿಡಿಯುವಲ್ಲಿ ಪೊಲೀಸರು ವಿಫಲರಾಗಿದ್ದರು.

ಈ ನಡುವೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ನಲಪಾಡ್ ಗೂಂಡಾಗಿರಿಯನ್ನು ಖಂಡಿಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರ ಕೂಡ ಮಾಡಿದರು.

ನಲಪಾಡ್ ಅವರನ್ನು ಹೊಟೆಲ್‌ನಲ್ಲಿ ಘಟನೆ ನಡೆದಾಗಲೇ ಬಂಧಿಸಬೇಕಿತ್ತು. ಆದರೆ ಪೊಲೀಸರು ಅವನನ್ನು ಬಂಧಿಸುವುದಕ್ಕೆ ಪ್ರಯತ್ನಿಸದೇ ಸುಮ್ಮನೇ ಗೃಹಸಚಿವರು ಇದರ ಜವಾಬ್ದಾರಿ ಹೊರಬೇಕು ಎಂದು ಪ್ರತಿಪಕ್ಷದ ಜಗದೀಶ್ ಶೆಟ್ಟರ್ ಒತ್ತಾಯಿಸಿದರು.

Recent Comments

Leave Comments

footer
Top