• 19 October 2018 13:13
Jai Kannada
Jai Kannada
Blog single photo
February 18, 2018

ಮಾಲೀಕನ ಪತ್ನಿಯ ಒಡನಾಟ: 2 ಕಣ್ಣು ಕಳೆದುಕೊಂಡ ಚಾಲಕ 

ಬೇಗುಸರಾಯ್(ಬಿಹಾರ್) : ಉದ್ರಿಕ್ತ ಗುಂಪೊಂದು ವ್ಯಕ್ತಿಯೊಬ್ಬನಿಗೆ ಥಳಿಸಿ ಅವನ ಕಣ್ಣುಗಳಿಗೆ ಅಮಾನುಷವಾಗಿ ಆ್ಯಸಿಡ್ ಚುಚ್ಚುಮದ್ದು ನೀಡಿದ್ದರಿಂದ ಅವನು ಎರಡೂ ಕಣ್ಣುಗಳನ್ನು ಕಳೆದುಕೊಂಡು ಕುರುಡನಾಗಿರುವ ಘಟನೆ ಸಂಭವಿಸಿದೆ.

ತನ್ನ ಮಾಲೀಕನ ಪತ್ನಿಯ ಜತೆ ಪರಾರಿಯಾಗಿದ್ದರಿಂದ ಗುಂಪು ಆ ವ್ಯಕ್ತಿಗೆ ಈ ಆ್ಯಸಿಡ್ ಶಿಕ್ಷೆ ನೀಡಿದೆ. ಕಳೆದ ರಾತ್ರಿ ಪಿಪ್ರಾ ಚೌಕದ ಉಪಾಹಾರಗೃಹದಲ್ಲಿ ಈ ಘಟನೆ ಸಂಭವಿಸಿದೆ. ವೃತ್ತಿಯಲ್ಲಿ ಚಾಲಕನಾಗಿದ್ದ ಈ ವ್ಯಕ್ತಿ ಈ ಘಟನೆಯ ಬಳಿಕ ಕುರುಡನಾಗಿದ್ದು, ಗಂಭೀರ ಗಾಯಗಳಾಗಿವೆ ಎಂದು ಅವನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

ಅವನು ಪೊಲೀಸರಿಗೆ ನೀಡಿದ ಹೇಳಿಕೆ ಕೆಳಗಿನಂತಿದೆ. ಫೆ. 6ರಂದು ಅವನು ತನ್ನ ಪ್ರೇಯಸಿಯಾದ ಮಾಲೀಕನ ಪತ್ನಿಯೊಂದಿಗೆ ಪರಾರಿಯಾಗಿದ್ದರಿಂದ ಅವಳ ಪತಿ ಪೊಲೀಸರಿಗೆ ತನ್ನ ಪತ್ನಿಯ ಅಪಹರಣದ ದೂರು ನೀಡಿದ್ದರು.

ಆದಾಗ್ಯೂ, ಫೆ. 16ರಂದು ತೆಗ್ರಾಗೆ ಬಂದ ಪತ್ನಿ ಸ್ಥಳೀಯ ಕೋರ್ಟ್‌ನಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಿ ತನ್ನ ಪತಿಗೆ ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಳು. ನಿನ್ನೆ ಸಂಜೆ ಅವಳ ಭಾವಮೈದ ಚಾಲಕನಿಗೆ ಕರೆ ಮಾಡಿ ಅವಳು ನಿನ್ನೊಂದಿಗೆ ಜೀವಿಸಲು ಇಚ್ಛಿಸಿದ್ದು, ಅವಳನ್ನು ಕರೆದುಕೊಂಡು ಹೋಗಲು ತೇಗ್ರಾ ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಿದ್ದ.

ತೇಗ್ರಾ ಠಾಣೆ ಒಂದು ಕಿಮೀ ದೂರದಲ್ಲಿರುವಾಗಲೇ  ಚಾಲಕನ ಮೇಲೆ 20 ಜನರ ಗುಂಪು ದಾಳಿ ಮಾಡಿ ಕಣ್ಣುಗಳಿಗೆ ಸಿರಿಂಜ್‌ ಮೂಲಕ ಆ್ಯಸಿಡ್ ಚುಚ್ಚಿದ್ದಲ್ಲದೇ ತೀವ್ರವಾಗಿ ಥಳಿಸಿದ್ದರು. ಬಳಿಕ ಹನುಮಾನ್ ಚೌಕದ ಬಳಿ ಎಸೆದುಹೋಗಿದ್ದರು.
.

Recent Comments

Leave Comments

footer
Top