• 19 October 2018 12:22
Jai Kannada
Jai Kannada
Blog single photo
February 18, 2018

ಪಿಎನ್‌ಬಿ ಬ್ಯಾಂಕ್ ವಂಚನೆ: ಪ್ರಧಾನಿ ಮೋದಿ ಮೌನಕ್ಕೆ ಟೀಕೆ 

 ನವದೆಹಲಿ: ಬಿಲಿಯಾಧಿಪತಿ, ಆಭರಣ ವ್ಯಾಪಾರಿ ನೀರವ್ ಮೋದಿ ಅವರನ್ನು ಒಳಗೊಂಡ ಬಹುಕೋಟಿ ರೂ. ಮೌಲ್ಯದ ಪಿಎನ್‌ಬಿ ವಂಚನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸತತ ಮೌನ ತಾಳಿರುವ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ.

ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಕೂಡ ರಾಹುಲ್ ವಾಗ್ದಾಳಿ ಮಾಡಿದರು.  ಭಾರತದ ಅತೀ ದೊಡ್ಡ ಬ್ಯಾಂಕ್ ಲೂಟಿ ಹಗರಣದಲ್ಲಿ ಸರ್ಕಾರ ಕೈಜೋಡಿಸಿದೆ ಎಂಬ ಕಾಂಗ್ರೆಸ್ ಆರೋಪಗಳಿಗೆ ಪ್ರತಿಏಟು ನೀಡಲು ಇತರೆ ಬಿಜೆಪಿ ಸಚಿವರು ಎದ್ದುನಿಂತರು. 2 ಗಂಟೆಗಳ ಪರೀಕ್ಷೆ ಪಾಸಾಗುವುದು ಹೇಗೆಂದು ಪ್ರಧಾನಿ ಮೋದಿ ಮಕ್ಕಳಿಗೆ ಪಾಠ ಮಾಡುತ್ತಾರೆ.

ಆದರೆ 22,000 ಕೋಟಿ ರೂ. ಬ್ಯಾಂಕಿಂಗ್ ಹಗರಣದ ಬಗ್ಗೆ ಪ್ರಧಾನಿ 2 ನಿಮಿಷಗಳ ಕಾಲವೂ ತುಟಿ ಬಿಚ್ಚುವುದಿಲ್ಲ ಎಂದು ರಾಹುಲ್  ಟೀಕಿಸಿದರು. ಜೇಟ್ಲಿ ಅಡಗಿಕೊಂಡಿದ್ದಾರೆ. ನೀವು ತಪ್ಪಿತಸ್ಥರಂತೆ ವರ್ತಿಸುವುದನ್ನು ನಿಲ್ಲಿಸಿ ಹೇಳಿಕೆ ನೀಡಿ ಎಂದು ರಾಹುಲ್ ಟ್ವೀಟ್‌ನಲ್ಲಿ ತಿಳಿಸಿದರು. ಫೆ.16ರಂದು ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಿಯ ಭಾಷಣ ಪ್ರಸ್ತಾಪಿಸುತ್ತಾ ರಾಹುಲ್ ಹೇಳಿದರು.

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೀರವ್ ಮೋದಿ ಹಗರಣ ಕುರಿತ  ಪರಸ್ಪರ ಚಕಮಕಿ ಮಧ್ಯೆ ರಾಹುಲ್ ಗಾಂಧಿ ಮಾತಿನ ಚಾಟಿ ಹಾರಿಸಿದ್ದರು. ಇಂತಹ ಪ್ರಮಾಣದ ಹಗರಣವು ಉನ್ನತ ಮಟ್ಟದ ರಕ್ಷಣೆಯಿಲ್ಲದೇ ಸಂಭವಿಸುತ್ತಿರಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದರೆ, ಯುಪಿಎ ಕಾಲಾವಧಿಯಲ್ಲಿ ಈ ಹಗರಣ ಮೊಳಕೆಯೊಡೆಯಿತು ಎಂದು ಬಿಜೆಪಿ ಆರೋಪಿಸಿತು. 
 

Recent Comments

Leave Comments

footer
Top