• 17 January 2019 20:37
Jai Kannada
Jai Kannada
Blog single photo
February 18, 2018

ಇರಾನ್ ವಿಮಾನ ಅಪಘಾತದಲ್ಲಿ 66 ಜನರ ದಾರುಣ ಸಾವು 


ಟೆಹ್ರಾನ್: ದಕ್ಷಿಣ ಇರಾನ್‌ನ ಮಂಜಿನಿಂದಾವೃತವಾದ ಪರ್ವತ ಪ್ರದೇಶದಲ್ಲಿ ಇರಾನ್ ವಾಣಿಜ್ಯೋದ್ದೇಶದ ವಿಮಾನವೊಂದು ಭಾನುವಾರ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಎಲ್ಲಾ 66 ಜನರೂ ಮೃತಪಟ್ಟಿರುವ ಭೀಕರ ಘಟನೆ ಸಂಭವಿಸಿದೆ. ಹತ್ತಿರಪ್ರಯಾಣದ ಹಾರಾಟಕ್ಕೆ ಬಳಸುವ ದ್ವಿಎಂಜಿನ್ ಟರ್ಬೊಪ್ರಾಪ್ ಇರಾನ್ ನಗರ ಯಾಸುಜ್ ಬಳಿ ಅಪಘಾತಕ್ಕೀಡಾಯಿತು.

ವಿಮಾನದಲ್ಲಿ ಒಂದು ಮಗು ಮತ್ತು 6 ಸಿಬ್ಬಂದಿಯ ಸಮೇತ 66  ಪ್ರಯಾಣಿಕರಿದ್ದರು. ದಟ್ಟವಾದ ಮಂಜಿನ ಸ್ಥಿತಿಯಿಂದಾಗಿ ಅಪಘಾತದ ಸ್ಥಳಕ್ಕೆ ರಕ್ಷಣಾ ಹೆಲಿಕಾಪ್ಟರ್‌ಗಳು ತಲುಪಲು ಸಾಧ್ಯವಾಗಲಿಲ್ಲ. ಸುಮಾರು 440 ಮೀಟರ್ ಎತ್ತರದ  ಮೌಂಟ್ ಡೆನಾದಲ್ಲಿ ವಿಮಾನ ಅಪಘಾತಕ್ಕೀಡಾಯಿತು.

ಅಂತಾರಾಷ್ಟ್ರೀಯ ದಿಗ್ಬಂಧನಗಳಿಂದಾಗಿ, ಇರಾನ್ ವಾಣಿಜ್ಯ ಪ್ರಯಾಣಿಕರ ವಿಮಾನಗಳು ಹಳೆಯದಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ವಿಮಾನ ಅಪಘಾತಗಳು ನಿಯಮಿತವಾಗಿ ಸಂಭವಿಸುತ್ತಿವೆ.

Recent Comments

Leave Comments

footer
Top