• 17 December 2018 20:32
Jai Kannada
Jai Kannada
Blog single photo
February 14, 2018

ಪ್ರೇಮಿಗಳ ದಿನದಂದು ನೈತಿಕ ಪೊಲೀಸರ ದಾದಾಗಿರಿ

ನವದೆಹಲಿ: ಪ್ರೇಮಿಗಳ ದಿನ ಆಚರಣೆ ವಿರುದ್ಧ ಬುದ್ಧವಾರ ನೈತಿಕ ಪೊಲೀಸರು ಭಾರತದ ವಿವಿಧ ಭಾಗಗಳಲ್ಲಿ ಕಾಣಿಸಿಕೊಂಡು ತಮ್ಮ ಬಲಪ್ರಯೋಗ ಮಾಡಿದರು. ಅಹ್ಮದಾಬಾದ್‌‌ನಲ್ಲಿ ಸ್ವಯಂಘೋಷಿತ ನೈತಿಕ ಪೊಲೀಸರು ಪ್ರೇಮಿಗಳನ್ನು ಅಟ್ಟಿಸಿಕೊಂಡು ಹೋದರು ಎಂದು ವರದಿಯಾಗಿದೆ. ಭಜರಂಗದಳದ ಸದಸ್ಯರು ನಗರ ಸಾಬರಮತಿ ರಿವರ್‌ಫ್ರಂಟ್‌ನಲ್ಲಿ ಪ್ರೇಮಿಗಳಿಗೆ ಕಿರುಕುಳ ನೀಡಿದರು.

ಈ ಸಂಘಟನೆಯು ಹೈದರಾಬಾದ್‌ನಲ್ಲಿ ಪ್ರೇಮಿಗಳ ದಿನದ ವಿರುದ್ಧ ಪ್ರತಿಭಟನೆ ನಡೆಸಿತು. ಬಲಪಂಥೀಯ ಗುಂಪು ನಾಗ್ಪುರದಲ್ಲಿ ಪ್ರೇಮಿಗಳ ದಿನದ ವಿರುದ್ಧ ರಾಲಿಯೊಂದನ್ನು ನಿನ್ನೆ ನಡೆಸಿತು. ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡಿದರೆ, ಅವರನ್ನು ಮದುವೆ ಮಾಡಿಸುವುದಾಗಿ ಅದು ಬೆದರಿಕೆ ಹಾಕಿತು.

ಅವರಿಗೆ ವ್ಯಾಲೆಂಟೈನ್ಸ್ ದಿನವನ್ನು ಆಚರಿಸುವ ಹಕ್ಕು ಇದ್ದರೆ, ನಮಗೆ ನಮ್ಮ ಪರಂಪರೆಯನ್ನು ರಕ್ಷಿಸುವ ಹಕ್ಕಿದೆ ಎಂದು ಅವರು ವಾದಿಸಿದರು. ಚೆನ್ನೈನಲ್ಲಿ ಭಾರತ್ ಹಿಂದು ರಂಗದ ಕಾರ್ಯಕರ್ತರು ಪ್ರತಿಭಟನೆಯ ಅಂಗವಾಗಿ ನಾಯಿ ಮತ್ತು ಕತ್ತೆಗೆ ಮದುವೆ ಮಾಡಿದರು.

Recent Comments

Leave Comments

footer
Top