• 19 February 2018 21:28
Jai Kannada
Jai Kannada
Blog single photo
February 14, 2018

ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರತಕ್ಕೆ ಅಗ್ರಸ್ಥಾನ 

ದುಬೈ: ದಕ್ಷಿಣ ಆಫ್ರಿಕಾ ವಿರುದ್ಧ 6 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತದ 4-1 ಲೀಡ್‌‌ನಿಂದಾಗಿ ಐಸಿಸಿ ಏಕದಿನ ಪಂದ್ಯಗಳ ಶ್ರೇಯಾಂಕದಲ್ಲಿ ಭಾರತಕ್ಕೆ ಅಗ್ರಸ್ಥಾನವು ಗಟ್ಟಿಯಾಗಿದೆ.

ಭಾರತ ಈ ಸರಣಿಯಲ್ಲಿ ಅಗ್ರಸ್ಥಾನಕ್ಕೇರಲು 4-2ರಿಂದ ಗೆಲುವು ಗಳಿಸುವ ಅಗತ್ಯವಿತ್ತು. 4-1ರ ಮುನ್ನಡೆಯಿಂದ ಪ್ರೊಟೀಸ್ ಅಂತಿಮ ಪಂದ್ಯವನ್ನು ಗೆದ್ದುಕೊಂಡರೂ ಕೂಡ ವಿರಾಟ್ ಕೊಹ್ಲಿ ಮತ್ತು ತಂಡ ಅಗ್ರಸ್ಥಾನದಲ್ಲಿ ಉಳಿಯಲಿದ್ದಾರೆ.

ದಕ್ಷಿಣ ಆಫ್ರಿಕಾ 6ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವು ಗಳಿಸಿದರೂ, ಭಾರತ 121 ಪಾಯಿಂಟ್‌ಗಳೊಂದಿಗೆ ನಂ. 1 ಸ್ಥಾನದಲ್ಲಿ ಉಳಿಯಲಿದ್ದು, ದಕ್ಷಿಣ ಆಫ್ರಿಕಾ 119 ಪಾಯಿಂಟ್ ಗಳಿಸಲಿದೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

 

Recent Comments

Leave Comments

footer
Top