• 17 December 2018 20:53
Jai Kannada
Jai Kannada
Blog single photo
February 12, 2018

ಮೀನು ತಿಂದು ಧರ್ಮಸ್ಥಳಕ್ಕೆ ಸಿದ್ದರಾಮಯ್ಯ ಭೇಟಿ: ಯಡಿಯೂರಪ್ಪ ಟೀಕೆ 


ಬೆಂಗಳೂರು: ಮೀನು ತಿಂದು ಧರ್ಮಸ್ಥಳಕ್ಕೆ ಹೋಗುವ ಸಿಎಂ ಸಿದ್ದರಾಮಯ್ಯ ಎಂದು ಬಿಜೆಪಿ ನಾಯಕ ಯಡಿಯುೂರಪ್ಪ ಟೀಕಿಸಿದ್ದಾರೆ. ಜವಾರಿ ಕೋಳಿ ತಿಂದು ರಾಹುಲ್ ಗಾಂಧಿಯಿಂದ ನರಸಿಂಹಸ್ವಾಮಿ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸಮಾಜವಾದ ಸಿದ್ಧಾಂತದ ಬೋಧನೆ ಮಾಡುವವರು ಮಜಾವಾದ ಆಚರಿಸುವುದು ಏಕೆ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಹಿಂದೂಗಳ ಭಾವನೆಗಳಿಗೆ ಈ ರೀತಿ ಧಕ್ಕೆ ಉಂಟುಮಾಡುವುದು ಏಕೆ ಎಂದೂ ಅವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ನಡುವೆ ವಾಕ್ಸಮರ ತಾರಕಕ್ಕೇರಿದ್ದು, ತಮ್ಮ ಮಾತಿನ ವರಸೆ ಮೂಲಕ ಒಬ್ಬರನ್ನೊಬ್ಬರು ಹಣಿಯುವ ಪ್ರಯತ್ನ ಜೋರಾಗಿ ನಡೆಯುತ್ತಿದೆ.

ಜೈಲಿಗೆ ಹೋಗಿ ಬಂದ ಯಡಿಯೂರಪ್ಪನ ಜತೆ ಪ್ರಧಾನಿ ಮೋದಿ ಕುಳಿತಿದ್ದಕ್ಕೆ ನಾಚಿಕೆಯಾಗಬೇಕು ಎಂದು ಸಿದ್ದರಾಮಯ್ಯ ಕೂಡ ಟೀಕಿಸಿದ್ದರು.

Recent Comments

Leave Comments

footer
Top