• 18 August 2018 20:01
Jai Kannada
Jai Kannada
Blog single photo
February 12, 2018

ಹೆಜ್ಜೇನುಗಳ ದಾಳಿ: ಮೃತದೇಹ ಬಿಟ್ಟು ಓಡಿಹೋದ ಜನರು 


ದೇವನಹಳ್ಳಿ: ಸ್ಮಶಾನದಲ್ಲಿ ಶವಸಂಸ್ಕಾರ  ಮಾಡುವ ಸಂದರ್ಭದಲ್ಲಿ ಜೇನುಹುಳುಗಳು ದಾಳಿ ನಡೆಸಿದ್ದರಿಂದ ಮೃತದೇಹ ಬಿಟ್ಟು ಜನರು ಓಡಿಹೋದ ಘಟನೆ ಸಂಭವಿಸಿದೆ.  ಹೆಜ್ಜೇನುಗಳ ದಾಳಿಗೆ ಸುಮಾರು 15ಕ್ಕೂ ಹೆಚ್ಚು ಜನರು ಗಾಯಗೊಂಡರು.

ದೇವನಹಳ್ಳಿಯ ವಿವೇಕಾನಂದನಗರದಲ್ಲಿ ಈ ಘಟನೆ ಸಂಭವಿಸಿದೆ. 2 ಗಂಟೆ ಬಳಿಕ ವಾಪಸು ಬಂದ ಸಂಬಂಧಿಕರು ಶವಸಂಸ್ಕಾರದ ವಿಧಿವಿಧಾನವನ್ನು ಪೂರೈಸಿದರು. ಸುಮಾರು 2 ತಿಂಗಳಿಂದ ಜೇನುಗೂಡು ಕಟ್ಟಿತ್ತೆಂದು ಹೇಳಲಾಗುತ್ತಿದೆ.

ನರಸಿಂಹಮೂರ್ತಿ ಎಂಬವರು ತೀರಿಕೊಂಡಿದ್ದರಿಂದ ಅವರ ಶವಸಂಸ್ಕಾರ ಮಾಡಲು ಜನರು ಬಂದಿದ್ದರು. ಆದರೆ ಊದುಗಡ್ಡಿಗಳ ಹೊಗೆಯಿಂದ ಗೂಡಿನಿಂದ ಹೊರಕ್ಕೆ ಬಂದ ಹೆಜ್ಜೇನುಗಳು ಸುಮಾರು ನಲ್ವತ್ತು ಜನರಿಗೆ ಕಚ್ಚಿತು. ಜನರು ಮುಖ ಮುಚ್ಚಿಕೊಂಡು ದಿಕ್ಕಾಪಾಲಾಗಿ ಓಡಿದರು.
.

Recent Comments

Leave Comments

footer
Top