• 16 February 2019 23:00
Jai Kannada
Jai Kannada
Blog single photo
February 11, 2018

ರಷ್ಯಾ ವಿಮಾನ ಅಪಘಾತದಲ್ಲಿ ಎಲ್ಲಾ 71 ಜನರ ದಾರುಣ ಸಾವು 

ಮಾಸ್ಕೊ:ರಷ್ಯಾದ ಡೋಮೊಡಿಡಿವೊ ವಿಮಾನನಿಲ್ದಾಣದಿಂದ ಹೊರಟಿದ್ದ ರಷ್ಯಾದ  ವಿಮಾನವೊಂದು ಮಾಸ್ಕೊದ ಹೊರಗೆ ಅಪಘಾತಕ್ಕೀಡಾಗಿ ಅದರಲ್ಲಿದ್ದ ಎಲ್ಲಾ 71 ಜನರೂ ದಾರುಣ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಸ್ಥಳೀಯ ಸರಾಟೊವ್ ಏರ್‌ಲೈನ್ಸ್ ನಿರ್ವಹಿಸುವ ಆಂಟೊನೊವ್ ಎಎನ್-148 ವಿಮಾನವು ಉರಲ್ಸ್ ನಗರ ಆರ್ಸ್ಕ್‌ಗೆ ಪ್ರಯಾಣಿಸುತ್ತಿದ್ದಾಗ ಮಾಸ್ಕೊದ ಹೊರವಲಯದ ರಾಮೆನ್ಸ್ಕಿ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ. 65 ಪ್ರಯಾಣಿಕರು ಮತ್ತು 6 ಮಂದಿ ಸಿಬ್ಬಂದಿ ವಿಮಾನದಲ್ಲಿದ್ದು, ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ.

ಅಪಘಾತಕ್ಕೀಡಾಗಿ ಹೊತ್ತಿಉರಿಯುತ್ತಿದ್ದ ವಿಮಾನವನ್ನು ಅರುಗೊನೊವ್ ಗ್ರಾಮದಲ್ಲಿ ಪ್ರತ್ಯಕ್ಷದರ್ಶಿಗಳು ಕಂಡಿದ್ದಾಗಿ ಸುದ್ದಿಸಂಸ್ಥೆಗಳು ವರದಿಮಾಡಿದೆ.

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ತೀವ್ರ ಸಂತಾಪವನ್ನು ಸೂಚಿಸಿದ್ದಾರೆ. 
 

Recent Comments

Leave Comments

footer
Top