• 26 September 2018 16:15
Jai Kannada
Jai Kannada
Blog single photo
February 11, 2018

ಜನಾಶೀರ್ವಾದ ಯಾತ್ರೆಯಲ್ಲಿ ಬಸ್‌ನಿಂದ ಕೆಳಕ್ಕಿಳಿಯದ ರಾಹುಲ್ 

ಕುಷ್ಟಗಿ: ರಾಜ್ಯದಲ್ಲಿ ಜನಾಶೀರ್ವಾದ ಯಾತ್ರೆಯ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕನಕಗಿರಿಯ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ತೆಗೆದುಕೊಂಡು ಬಳಿಕ ಕನಕಾಚಲಪತಿ ದೇಗುಲಕ್ಕೆ ತೆರಳಿ ದೇವರ ದರ್ಶನ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಬಸ್ ಬಳಿಗೆ ತೆರಳಿ ಜನರ ಜತೆ ಮಾತನಾಡುವಂತೆ ಶಾಸಕ ಶಿವರಾಜ್ ತಂಗಡಗಿ ರಾಹುಲ್ ಗಾಂಧಿಗೆ ಮನವಿ ಮಾಡಿಕೊಂಡ ಘಟನೆ ಸಂಭವಿಸಿದೆ.

ರಾಹುಲ್ ಅವರನ್ನು ಕೆಳಕ್ಕಿಳಿಸುವಂತ ಎಸ್‌ಪಿಜಿಗೆ ಕೂಡ ಮನವಿ ಮಾಡಿಕೊಂಡರು. ಆದರೆ ರಾಹುಲ್ ಬಸ್ನಿಂದ ಆಚೆಗೆ ಬರದಿದ್ದರಿಂದ ತಂಗಡಗಿ ತಾವೇ ಬಸ್ನೊಳಕ್ಕೆ ಏರಿದರು. ಕುಷ್ಟಗಿಯಲ್ಲಿ ನಡೆದ ಸಾರ್ವಜನಿಕ ಸಭೆಯ ಬಳಿಕ ಬಸ್‌ವೊಂದರಲ್ಲಿ ಜನರಿಗೆ ಕಾಂಗ್ರೆಸ್ ಸದಸ್ಯರು ಹಣ ಹಂಚುತ್ತಿದ್ದ ದೃಶ್ಯ ಕೂಡ ಕಂಡುಬಂದಿದೆ. ರಾಹುಲ್ ಮಧ್ಯಾಹ್ನ 2.05ಕ್ಕೆ ರೋಡ್ ಶೋ ಹಮ್ಮಿಕೊಂಡಿದ್ದಾರೆ.  ಮಧ್ಯಾಹ್ನ 3 ಗಂಟೆಗೆ ಕಾರಟಗಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಮಾತನಾಡಲಿದ್ದಾರೆ.

Recent Comments

Leave Comments

footer
Top