• 17 January 2019 20:40
Jai Kannada
Jai Kannada
Blog single photo
February 11, 2018

ಸುಂಜುವಾನ್ ಶಿಬಿರದ ಮೇಲೆ ದಾಳಿಯಲ್ಲಿ ಐವರು ಯೋಧರು ಹುತಾತ್ಮರು

.
ನವದೆಹಲಿ: ಜಮ್ಮುವಿನ ಸುಂಜುವಾನ್ ಸೇನಾ ಶಿಬಿರದ ವಸತಿ ನಿಲಯದಲ್ಲಿ ನಿನ್ನೆಯಿಂದ ಅಡಗಿದ್ದ ಭಯೋತ್ಪಾದಕರ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಸಂದರ್ಭದಲ್ಲಿ ಐವರು ಸೈನಿಕರು ಹುತಾತ್ಮರಾಗಿದ್ದು, ಒಬ್ಬ ನಾಗರಿಕರು ಕೂಡ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಭದ್ರತಾ ಸಿಬ್ಬಂದಿ ನಾಲ್ವರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿದ್ದಾರೆ.

ಐವರು ಹುತಾತ್ಮ ಸೇನಾ ಸಿಬ್ಬಂದಿ ಮತ್ತು ಒಬ್ಬ ನಾಗರಿಕರನ್ನು ಗುರುತಿಸಲಾಗಿದ್ದು, ಸುಬೇದಾರ್ ಮದನ್ ಲಾಲ್ ಚೌಧರಿ, ಸುಬೇದಾರ್ ಮಹಮ್ಮದ್ ಅಶ್ರಫ್ ಮಿರ್, ಹವಾಲ್ದಾರ್ ಹಬೀಬ್ ಉಲ್ಲಾ ಖುರೇಶಿ, ಮಂಜೂರ್ ಅಹ್ಮದ್, ಲೆಫ್ಟಿನೆಂಟ್ ಮಹ್ಮದ್ ಇಕ್ಬಾಲ್ ಮತ್ತು ಮಹ್ಮದ್ ಇಕ್ಬಾಲ್ ತಂದೆ ಮೃತಪಟ್ಟವರು.

ರಾತ್ರಿ ವೇಳೆ ಯಾವುದೇ ಗುಂಡಿನ ದಾಳಿ ನಡೆಸಿಲ್ಲವೆಂದು,  ವಸತಿ ಕ್ವಾರ್ಟರ್ಸ್
ನಿಂದ ಜನರನ್ನು ತೆರವು ಮಾಡಲು ಗಮನಹರಿಸಲಾಗಿದೆಯೆಂದು ಸೇನೆ ತಿಳಿಸಿದೆ. ನಿನ್ನೆ ಬೆಳಗಿನ ಜಾವ ಭಾರೀ ಶಸ್ತ್ರಸಜ್ಜಿತರಾಗಿದ್ದ ಜೈಶೆ ಮೊಹಮ್ಮದ್ ಭಯೋತ್ಪಾದಕರ ಗುಂಪು ಜಮ್ಮುಕಾಶ್ಮೀರದ 36 ಬ್ರಿಗೇಡ್ ಪದಾತಿ ದಳದ ಶಿಬಿರದ ಮೇಲೆ ದಾಳಿ ಮಾಡಿದ್ದರು. ಸೇನೆ ಪ್ರತಿದಾಳಿ ನಡೆಸಿದ್ದರಿಂದ ಉಂಟಾದ ಗುಂಡಿನ ಚಕಮಕಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. 2001ರ ಸಂಸತ್ತಿನ ದಾಳಿಯಲ್ಲಿ ಅಪರಾಧಿಯಾಗಿದ್ದ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ 5ನೇ ವರ್ಷಾಚರಣೆಗೆ ಈ ದಾಳಿ ಹೊಂದಿಕೊಂಡಿದ್ದು, ಭಯೋತ್ಪಾದಕರು ಕಗ್ಗತ್ತಲಿನಲ್ಲಿ ದಾಳಿ ನಡೆಸಿದಾಗ ಸೈನಿಕರು ಮತ್ತು ಕುಟುಂಬಗಳು ಗಾಢ ನಿದ್ರೆಯಲ್ಲಿದ್ದರು.
.

Recent Comments

Leave Comments

footer
Top