• 18 August 2018 20:00
Jai Kannada
Jai Kannada
Blog single photo
January 28, 2018

3ನೇ ಟೆಸ್ಟ್‌ನಲ್ಲಿ ಭಾರತಕ್ಕೆ ಜಯ: ಕ್ಲೀನ್ ಸ್ವೀಪ್‌ನಿಂದ ಪಾರು 

 ನವದೆಹಲಿ: ಮೊಹಮದ್ ಶಮಿ ಸಾರಥ್ಯದಲ್ಲಿ ಭಾರತ ಬೌಲರುಗಳ ಪ್ರಚಂಡ ಬೌಲಿಂಗ್ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ 3ನೇ ಟೆಸ್ಟ್‌ನಲ್ಲಿ ಸೋತು ಶರಣಾಗುವ ಮೂಲಕ ಭಾರತ ಕ್ಲೀನ್ ಸ್ವೀಪ್ ಭೀತಿಯಿಂದ ಪಾರಾಗಿದೆ. ಜೋಹಾನ್ಸ್‌ಬರ್ಗ್ ವಾಂಡರರ್ಸ್ ಸ್ಟೇಡಿಯಂನಲ್ಲಿ ಭಾರತ 63 ರನ್ ಅಂತರದಿಂದ ಜಯಗಳಿಸಿದೆ.

ದಕ್ಷಿಣ ಆಫ್ರಿಕಾ ಕೊನೆಯ 9 ವಿಕೆಟ್‌ಗಳನ್ನು ಕೇವಲ 53 ರನ್‌ಗಳಲ್ಲಿ ಕಳೆದುಕೊಂಡಿದ್ದು, 1 ವಿಕೆಟ್ ನಷ್ಟಕ್ಕೆ 124 ರನ್‌ಗಳಿಂದ 177ಕ್ಕೆ ಆಲೌಟ್ ಆಯಿತು.

 ಡೀನ್ ಎಲ್ಕಾರ್ ಮತ್ತು ಹಶೀಮ್ ಆಮ್ಲಾ ಭಾರತದ ಬೌಲರುಗಳಿಗೆ ದಿನವಿಡೀ ಆಡಿ ಬೆವರಿಳಿಸಿದರು. ಆದರೆ ಆಮ್ಲಾ ಮತ್ತು ಡಿ ವಿಲಿಯರ್ಸ್ ಅವರ ಎರಡು ವಿಕೆಟ್‌ಗಳಿಂದ ಭಾರತದ ಬೌಲರುಗಳಿಗೆ ಪ್ರವಾಹದ ಬಾಗಿಲು ತೆರೆದಂತಾಯಿತು. 
 ಎರಡನೇ ಇನ್ನಿಂಗ್ಸ್‌ನಲ್ಲಿ 9 ಓವರು ಬೌಲ್ ಮಾಡಿದ್ದ ಶಮಿ ವ
ರ್ನನ್ ಫಿಲಾಂಡರ್, ಫೆಲುಕುವಾಯೊ ಮತ್ತು ಮೊರ್ನೆ ಮಾರ್ಕೆಲ್ ವಿಕೆಟ್‌ ಕಬಳಿಸುವ ಮೂಲಕ ಪುಟಿದೆದ್ದರು.
ಬಳಿಕ ಭುವನೇಶ್ವರ್ ಕುಮಾರ್ ರಬಾಡಾ ವಿಕೆಟ್ ಕಿತ್ತರು. ಶಮಿ ಲುಂಗಿ ಎನ್‌ಜಿಡಿ ವಿಕೆಟ್ ಗಳಿಸುವ ಮೂಲಕ 5 ವಿಕೆಟ್ ಪೂರ್ಣಗೊಳಿಸಿದರು.ಶಮಿ 28ಕ್ಕೆ 5 ವಿಕೆಟ್ ಕಬಳಿಸಿದರೆ, ಎಲ್ಗಾರ್  240 ಎಸೆತಗಳಲ್ಲಿ ದಿಟ್ಟ 86 ರನ್ ಗಳಿಸಿದರು. ಭಾರತ ಸರಣಿ ಸೋತರೂ ಕೂಡ ದ.ಆಫ್ರಿಕಾ ಪಿಚ್‌ನಲ್ಲಿ ಅವರಿಗೆ ಅನುಕೂಲಕರ ರೀತಿಯಲ್ಲಿ ಸಿದ್ದಪಡಿಸಿದ ಪಿಚ್‌ನಲ್ಲಿ ಭಾರತದ ಬೌಲರುಗಳು ಬೌನ್ಸ್ ಮೂಲಕ ಅವರಿಗೆ ತಿರುಗುಬಾಣ ನೀಡಿ ಗೆದ್ದಿರುವುದು ಶ್ಲಾಘನೀಯ.
 ಸ್ಕೋರು ವಿವರ:
ಭಾರತ 187 ಮತ್ತು 247/10 ದಕ್ಷಿಣ ಆಫ್ರಿಕಾ 194 ಮತ್ತು 177/ 10
64 ರನ್‌ಗಳಿಂದ ಭಾರತಕ್ಕೆ ಜಯ
 

Recent Comments

Leave Comments

footer
Top