• 26 September 2018 16:16
Jai Kannada
Jai Kannada
Blog single photo
January 19, 2018

20 ಎಎಪಿ ಶಾಸಕರ ಅನರ್ಹತೆಗೆ ಶಿಫಾರಸು: ಆಮ್ ಆದ್ಮಿ ಪಕ್ಷಕ್ಕೆ ಪೆಟ್ಟು 

ನವದೆಹಲಿ: ;ಸಂಸದೀಯ ಕಾರ್ಯದರ್ಶಿಗಳಾಗಿ ಲಾಭದಾಯಕ ಹುದ್ದೆ ಹೊಂದಿದ ಆರೋಪದ ಮೇಲೆ ಚುನಾವಣೆ ಆಯೋಗವು 20 ಶಾಸಕರ ಅನರ್ಹತೆಗೆ ಶಿಫಾರಸು ಮಾಡಿರುವುದು ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಪೆಟ್ಟು ನೀಡಿದಂತಾಗಿದೆ.

ಮೂಲಗಳ ಪ್ರಕಾರ, ಇಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಅದರ ಶಿಫಾರಸುಗಳನ್ನು ಕಳಿಸಿದೆ. ರಾಷ್ಟ್ರಪತಿಗೆ ಏನು ಶಿಫಾರಸು ಮಾಡಲಾಗಿದೆ ಎಂಬ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ ಎಂದು ಚುನಾವಣೆ ಆಯುಕ್ತ ಜೋತಿ ತಿಳಿಸಿದರು.

ದೆಹಲಿ ವಕೀಲ ಪ್ರಶಾಂತ್ ಪಟೇಲ್ ಎಎಪಿ ಶಾಸಕರ ವಿರುದ್ಧ ಅರ್ಜಿ ಸಲ್ಲಿಸಿ ಅವರ ಅನರ್ಹತೆಯನ್ನು ಕೋರಿದ್ದರು. ಶಾಸಕರು ಸಂಸದೀಯ ಕಾರ್ಯದರ್ಶಿಗಳಿಗೆ ಭತ್ಯೆಗಳು ಮತ್ತು ಸೌಲಭ್ಯಗಳನ್ನು ಅನುಭವಿಸಿದ್ದಾರೆಂದು ಅರ್ಜಿಯಲ್ಲಿ ದೂರಿದ್ದರು. 

ಕಾಂಗ್ರೆಸ್ ಕೂಡ 2016ರ ಜೂ. 9ರಂದು ಚುನಾವಣೆ ಆಯೋಗಕ್ಕೆ ಅರ್ಜಿ ಸಲ್ಲಿಸಿ 21 ಶಾಸಕರನ್ನು ಅಮಾನತುಗೊಳಿಸುವಂತೆ ಕೋರಿತ್ತು. 21 ಶಾಸಕರ ಪೈಕಿ ಜರ್ನೈಲ್ ಸಿಂಗ್  ರಾಜೌರಿ ಗಾರ್ಡನ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅವರ ವಿರುದ್ಧ ಕ್ರಮ ಕೈಬಿಡಲಾಗಿತ್ತು.
 

Recent Comments

Leave Comments

footer
Top