• 17 December 2018 20:05
Jai Kannada
Jai Kannada
Blog single photo
January 19, 2018

54 ಸೇವೆಗಳು, 29 ಸರಕುಗಳ ಮೇಲೆ ಜಿಎಸ್‌ಟಿ ತೆರಿಗೆ ಇಳಿಕೆ 

ನವದೆಹಲಿ: ಕೇಂದ್ರ ಸರ್ಕಾರ ಜಿಎಸ್‌ಟಿ ತೆರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸುವ ಪ್ರಯತ್ನ ನಡೆಸಿದೆ. ಜಿಎಸ್‌ಟಿ ಮಂಡಳಿ ಗುರುವಾರ 54 ಸೇವೆಗಳು ಮತ್ತು  29 ಸರಕುಗಳ ಮೇಲಿನ ತೆರಿಗೆ ದರವನ್ನು ಇಳಿಸಿದೆ. ಇವುಗಳಲ್ಲಿ ಹಳೆಯ ಮತ್ತು ಬಳಸಿದ ಮೊಟರ್ ವಾಹನದ ಜೈವಿಕ ಡೀಸೆಲ್ ಕೂಡ ಸೇರಿದೆ.

ಮುಂದಿನ ಸಭೆಯಲ್ಲಿ ಸಮಿತಿಯು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವ್ಯಾಪ್ತಿಗೆ ಪೆಟ್ರೋಲಿಯಂ ಮತ್ತು ಸ್ಥಿರಾಸ್ತಿಯನ್ನು ತರುವ ಬಗ್ಗೆ ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದರು.

 ಮಂಡಳಿಯು ಹಳೆಯ ಮಧ್ಯಮ ಮತ್ತು ದೊಡ್ಡ ಕಾರುಗಳು ಮತ್ತು ಎಸ್‌ಯುವಿಗಳ ಜಿಎಸ್‌ಟಿ ದರವನ್ನು ಶೇ. 28ರಿಂದ ಶೇ. 18ಕ್ಕೆ ಕಡಿತ ಮಾಡಿದೆ ಮತ್ತು ಹಳೆ ಮತ್ತು ಬಳಸಿದ ಮೋಟರ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ. 12ಕ್ಕೆ ನಿಗದಿ ಮಾಡಿದೆ.
ವಜ್ರಗಳು ಮತ್ತು ಅಮೂಲ್ಯ ಹರಳುಗಳ ಮೇಲಿನ ಜಿಎಸ್‌ಟಿಯನ್ನು ಪ್ರಸಕ್ತ ಶೇ. 3ರಿಂದ ಶೇ. 0.25ಕ್ಕೆ ಕಡಿತ ಮಾಡಿದೆ.

 ಜೈವಿಕ ಡೀಸೆಲ್ ಮೇಲಿನ ತೆರಿಗೆ ದರವನ್ನು ಶೇ. 18ರಿಂದ ಶೇ. 12ಕ್ಕೆ ಇಳಿಸಿದೆ. ಸಾರಿಗೆ ಬಸ್‌ಗಳಲ್ಲಿ ಬಳಸುವ ಪರಿಸರ ಸ್ನೇಹಿ ಜೈವಿಕ ಡೀಸೆಲ್‌ಗಳ ಮೇಲೆ ತೆರಿಗೆಯನ್ನು ಶೇ. 28ರಿಂದ ಶೇ. 18ಕ್ಕೆ ಇಳಿಸಲಾಗಿದೆ.

ಸಕ್ಕರೆಯಲ್ಲಿ ಕುದಿಸಿದ ಮಿಠಾಯಿ, 20 ಲೀಟರ್ ಸೀಸೆಯ ಕುಡಿಯುವ ನೀರು, ರಸಗೊಬ್ಬರ ದರ್ಜೆಯ ಫಾಸ್ಫರಿಕ್ ಆಸಿಡ್, ಜೈವಿಕ ಡೀಸೆಲ್ ಮತ್ತು ಹನಿ ನೀರಾವರಿ ವ್ಯವಸ್ಥೆಯನ್ನು ಶೇ. 18ರಿಂದ ಶೇ. 12ಕ್ಕೆ ಇಳಿಸಲಾಗಿದೆ.

ಸಭೆಯಲ್ಲಿ ಭಾಗವಹಿಸಿದ್ದ ಇನ್ಫೊಸಿಸ್‌ನ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್‌ ನಿಲೇಕಣಿ ಅವರು ಆದಾಯತೆರಿಗೆ ವಿವರ ಸಲ್ಲಿಕೆ ಪ್ರಕ್ರಿಯೆ ಸರಳಗೊಳಿಸುವ ಬಗ್ಗೆ ಮಾಹಿತಿ ನೀಡಿದರು.  ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿಯ 25ನೇ ಸಭೆಯಲ್ಲಿ ಹೊಸ ದರಗಳು ಇದೇ 25 ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದರು.

Recent Comments

Leave Comments

footer
Top