• 09 April 2020 23:28
Jai Kannada
Jai Kannada
Blog single photo
March 26, 2020

ದಯವಿಟ್ಟು ಮನೆಯಲ್ಲೇ ಇರಿ: ಇಟಲಿಯಿಂದ ಮನವಿ ಮಾಡಿಕೊಂಡ ಕನ್ನಡತಿ 

 ನವದೆಹಲಿ:  ಸೆಂಟ್ರಲ್ ಇಟಲಿಯಲ್ಲಿರುವ ಕನ್ನಡತಿ ಅನುಶ್ರೀ ಇಟಲಿಯಲ್ಲಿನ ಕೊರೊನಾ ವೈರಸ್ ಮಹಾಮಾರಿಯ ರುದ್ರನರ್ತನವನ್ನು ವಿವರಿಸಿದ್ದಾರೆ.  ಇಟಲಿಯಲ್ಲಿ ಆರಂಭದಲ್ಲೇ ಲಾಕ್ ಡೌನ್ ಮಾಡಿದ್ದರೂ ಜನರು ಅಷ್ಟಾಗಿ ಗಮನವಹಿಸದೇ ಆಚೆಈಚೆ ಬೇರೆ ಊರುಗಳಿಗೆ ಓಡಾಡುತ್ತಿದ್ದರು. ಈಗ ಇಡೀ ಇಟಲಿಯಲ್ಲಿ ಕೊರೊನಾ ವೈರಸ್ ವ್ಯಾಪಿಸಿದೆ.

ಇಟಲಿಯಲ್ಲಿ 2ನೇ ವಾರ 245 ಕೇಸ್ ಇತ್ತು. ಇಂಡಿಯಾದಲ್ಲಿ 600ಕ್ಕೂ ಹೆಚ್ಚು ಪಾಸಿಟಿವ್ ಕೇಸ್ 2 ವಾರದಲ್ಲಿ ಆಗಿದೆ. ಆದ್ದರಿಂದ ದಯವಿಟ್ಟು ಮನೆಯಲ್ಲೇ ಇರಿ. ನಮ್ಮಿಂದ ಇಡೀ ದೇಶಕ್ಕೆ, ಎಲ್ಲರಿಗೂ ಎಫೆಕ್ಟ್ ಆಗುವುದು ಬೇಡ. ನಾನು ಕೂಡ ಟ್ರಾವಲ್ ಮಾಡಿ ಭಾರತಕ್ಕೆ ಬರಬಹುದು. ಆದರೆ ಟ್ರಾವಲ್ ಮಾಡುವಾಗಲೇ ಸೋಂಕಿಗೆ ಒಳಗಾಗಿ ಇನ್ನಷ್ಟು ಜನರಿಗೆ ಭಾರತದಲ್ಲಿ ಹರಡುವುದು ನನಗಿಷ್ಟವಿಲ್ಲ.

ಆದ್ದರಿಂದ ದಯವಿಟ್ಟು ಅರ್ಥಮಾಡಿಕೊಂಡು ಎಲ್ಲರೂ ಮನೆಯಲ್ಲೇ ಉಳಿಯಿರಿ. ಯಾರಿಗೆ ಸಾಧ್ಯತೆಯಿದೆ ಎಲ್ಲರೂ ವರ್ಕ್ ಫ್ರಂ ಹೋಂ ಮಾಡಿ ಎಂದು ಅನುಶ್ರೀ ವಿನಂತಿಸಿಕೊಂಡಿದ್ದಾರೆ. 
 ಇಟಲಿಯಿಂದ ಮನವಿ ಮಾಡಿದ ಕನ್ನಡತಿ( ವಿಡಿಯೊ)

Recent Comments

Leave Comments

footer
Top