• 09 April 2020 22:57
Jai Kannada
Jai Kannada
Blog single photo
March 26, 2020

 ಕೊರೊನಾ ರೌದ್ರಾವತಾರಕ್ಕೆ ಬೆಚ್ಚಿ ಬಿದ್ದ ಸ್ಪೇನ್, ಇಟಲಿ ದೇಶಗಳು 

ಮ್ಯಾಡ್ರಿಡ್: ಮಹಾಮಾರಿ ಕೊರೊನಾ ವೈರಸ್ ಸ್ಪೇನ್ ಮತ್ತು ಇಟಲಿಯಲ್ಲಿ ತನ್ನ ಮರಣಮೃದಂಗ ಮುಂದುವರಿಸಿದ್ದು ಸ್ಪೇನ್ ಅಲ್ಲಿನ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದೇ ಚೀನಾದ ನೆರವಿಗೆ ಸಹಾಯಹಸ್ತ ಬೇಡಿದೆ. ಸ್ಪೇನ್‌ನಲ್ಲಿ ಒಂದೇ ದಿನ 738 ಮಂದಿ ಕೊರೊನಾ ರೌದ್ರಾವತಾರಕ್ಕೆ ಬಲಿಯಾಗಿದ್ದು, ಮೃತರ ಸಂಖ್ಯೆ 3424ಕ್ಕೆ ಮುಟ್ಟಿದ್ದು, ಚೀನಾವನ್ನು ಹಿಂದಿಕ್ಕಿ ನಾಗಲೋಟದಲ್ಲಿ ಓಡುತ್ತಿದೆ.

ಇಟಲಿಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 6820ಕ್ಕೆ ಮುಟ್ಟಿದ್ದು, ಕೊರೊನಾ ರೋಗಿಗಳಿಗೆ ಹೆಚ್ಚು ಗಮನ ನೀಡುತ್ತಿರುವುದರಿಂದ ಕ್ಯಾನ್ಸರ್ ಮುಂತಾದ ರೋಗಗಳ ಚಿಕಿತ್ಸೆಯಲ್ಲಿ ವಿಳಂಬವಾಗುತ್ತಿದೆ. ಅನೇಕ ಕ್ಯಾನ್ಸರ್ ರೋಗಿಗಳು ಚಿಕಿತ್ಸೆಯಿಲ್ಲದೇ ಸಾಯುವ ಹಂತಕ್ಕೆ ಮುಟ್ಟಿದ್ದಾರೆ.

ಸ್ಪೇನ್ ಸರ್ಕಾರವು ವೈದ್ಯಕೀಯ ವಸ್ತುಗಳ ತೀವ್ರ ಕೊರತೆ ಎದುರಿಸುತ್ತಿದ್ದು ಚೀನಾ ಮೊರೆ ಹೋಗಿದೆ. ವಿಶ್ವದ ವಿವಿಧೆಡೆ ಇದುವರೆಗೆ 440000 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸಾವಿನ ಸಂಖ್ಯೆ 20000 ಗಡಿಯನ್ನು ದಾಟಿದೆ.

Recent Comments

Leave Comments

footer
Top