• 09 April 2020 22:27
Jai Kannada
Jai Kannada
Blog single photo
March 26, 2020

ಲಾಕ್‌ಡೌನ್ ಉಲ್ಲಂಘಿಸಿದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು 

 ಕುಂದಾಪುರ: ಕೊರೊನಾ ವೈರಸ್ ಸಾಂಕ್ರಾಮಿಕದ ವಿರುದ್ಧ ಇಡೀ ದೇಶದಲ್ಲಿ ವಿಧಿಸಿದ ಲಾಕ್ ಡೌನ್ ಉಲ್ಲಂಘನೆ ಮಾಡಿದ ಆರೋಪದ ಮೇಲೆ ತಾಲೂಕಿನ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

 ಬಂಧಿತ ವ್ಯಕ್ತಿಯನ್ನು ಉಪ್ಪಿನಕುದ್ರು ನಿವಾಸಿ ವಿಶ್ವನಾಥ್ ಭಟ್ ಎಂದು ಗುರುತಿಸಲಾಗಿದೆ. ಅವರು ಎರಡನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ.

ಆರೋಪಿ ವಿಶ್ವನಾಥ್ ಭಟ್ ಮಾಸ್ಕ್ ಧರಿಸಿರಲಿಲ್ಲ ಮತ್ತು ಮೂಡ್ಲುಕಟ್ಟೆಯಿಂದ ಬರುತ್ತಿದ್ದ ಅವರನ್ನು ಪೊಲೀಸರು ಪ್ರಶ್ನಿಸಿದಾಗ ಕೋಪಗೊಂಡ ವಿಶ್ವನಾಥ್ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದರು. ಆದರೆ ಪೊಲೀಸ್ ಠಾಣೆಯಲ್ಲಿ ಅವರನ್ನು ದೂರನ್ನು ಸ್ವೀಕರಿಸಲಿಲ್ಲವಾದ್ದರಿಂದ ಕೋಪಗೊಂಡ ವಿಶ್ವನಾಥ್ ಡಿಸಿಗೆ ಕರೆ ಮಾಡಿ ಪೊಲೀಸರ ವಿರುದ್ಧ ದೂರು ನೀಡುವುದಾಗಿ ಬೆದರಿಸಿದರು. ಸ್ಥಳದಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ಹರೀಷ್ ಅವರ ಮೇಲೆ ಲಾಠಿ ಬೀಸಿ, ಎಸಿ ರಾಜು ಆದೇಶದ ಮೇರೆಗೆ ವಿಶ್ವನಾಥ್‌ನನ್ನು ಬಂಧಿಸಿ ಕೇಸ್ ದಾಖಲು ಮಾಡಿದ್ದಾರೆ.

 ಲಾಕ್‌ಡೌನ್ ಉಲ್ಲಂಘಿಸಿ ರಸ್ತೆಯಲ್ಲಿ ಓಡಾಡುವವರನ್ನು ಬಂಧಿಸದೇ ಬೇರೆ ದಾರಿಯೇ ಇಲ್ಲ ಎಂದು ಸಚಿವ ಸುಧಾಕರ್ ಹೇಳಿಕೆ ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ.

Recent Comments

Leave Comments

footer
Top