• 09 April 2020 21:46
Jai Kannada
Jai Kannada
Blog single photo
March 26, 2020

ಕರೊನಾ ಲಾಕ್‌ಡೌನ್‌:  ಜನರಿಗೆ, ಉದ್ಯಮಿಗಳಿಗೆ ಬ್ಯಾಂಕುಗಳ ವಿಶೇಷ ಸಾಲ ಯೋಜನೆ 

ನವದೆಹಲಿ: ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ತೊಂದರೆಗೊಳಗಾದ ಜನರಿಗೆ ನೆರವಾಗಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಾದ ಇಂಡಿಯನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ ಬುಧವಾರ ವಿಶೇಷ ತುರ್ತು ಸಾಲಗಳನ್ನು ಪ್ರಕಟಿಸಿದೆ. ಇದಲ್ಲದೇ ಕೆನರಾ ಬ್ಯಾಂಕ್, ಯೂಕೊ ಬ್ಯಾಂಕ್ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಕೂಡ ಗ್ರಾಹಕರಿಗೆ ತುರ್ತು ಸಾಲಗಳನ್ನು ಘೋಷಿಸಿದೆ.

ಕೆನರಾ ಬ್ಯಾಂಕ್ ಎಂಎಸ್‌ಎಂ/ ಕಾರ್ಪೊರೇಟ್/ ಬಿಸಿನೆಸ್/ಕೃಷಿ ಮತ್ತು ರಿಟೇಲ್ ಗ್ರಾಹಕರಿಗೆ ಕೋವಿಡ್-19ರ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಗದು ಕೊರತೆಯನ್ನು ನೀಗಿಸಲು ವಿಶೇಷ ಸಾಲ ಯೋಜನೆಗಳನ್ನು ಪ್ರಕಟಿಸಿದೆ.

ವೇತನದಾರರಿಗೆ ಇಂಡಿಯನ್ ಬ್ಯಾಂಕ್ ಇಂಡ್-ಕೋವಿಡ್ ತುರ್ತು ವೇತನ ಸಾಲವನ್ನು ರೂಪಿಸಿದೆ. ಈ ಯೋಜನೆಯಲ್ಲಿ ವೇತನದಾರರು ಇತ್ತೀಚಿನ ಮಾಸಿಕ ಒಟ್ಟು ವೇತನದ 20 ಪಟ್ಟು ಮೊತ್ತವನ್ನು ಸಾಲವಾಗಿ ಪಡೆಯಬಹುದು.

Recent Comments

Leave Comments

footer
Top