• 09 April 2020 23:27
Jai Kannada
Jai Kannada
Blog single photo
March 26, 2020

ಪೊಲೀಸರ ಕಿರುಕುಳಕ್ಕೆ ಬೇಸತ್ತ ಅಮೆಜಾನ್, ಬಿಗ್ ಬಾಸ್ಕೆಟ್ ಕಾರ್ಯಾಚರಣೆ ಸ್ಥಗಿತ 

ಬೆಂಗಳೂರು: ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್ ಮತ್ತು ಬಿಗ್ ಬಾಸ್ಕೆಟ್ ರಾಜ್ಯಾದ್ಯಂತ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ. ಕೋವಿಡ್-19 ಲಾಕ್‌ಡೌನ್ ಮಧ್ಯದಲ್ಲಿ ಪೊಲೀಸ್ ಕಿರುಕುಳ ನೀಡುತ್ತಿದ್ದಾರೆಂದು ಡೆಲಿವರಿ ಎಕ್ಸಿಕ್ಯೂಟಿವ್‌ಗಳು ದೂರು ನೀಡಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

21 ದಿನಗಳ ಶಟ್‍ಡೌನ್ ಜನರಲ್ಲಿ ತುಂಬಾ ಗಾಬರಿ ಮೂಡಿಸಿದ್ದು, ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಆಹಾರ, ಔಷಧಿ, ದಿನಸಿ, ತರಕಾರಿ/ಹಣ್ಣು ಅಥವಾ ಪ್ರಾಣಿ ಜನ್ಯ ಉತ್ಪನ್ನಗಳ ಆನ್‌ಲೈನ್ ಪೂರೈಕೆದಾರರ ಸಭೆಯನ್ನು ಬುಧವಾರ ಕರೆದಿದ್ದರು. ಈ ಸಭೆಯ ಬಳಿಕ ಅಗತ್ಯವಸ್ತುಗಳನ್ನು ಸರಬರಾಜು ಮಾಡುವ ಜನರಿಗೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡ್ಯೂಟಿ ಪಾಸ್ ನೀಡಲು ನಿರ್ಧರಿಸಲಾಯಿತು.

ಅಗತ್ಯವಸ್ತುಗಳಾದ ದಿನಸಿ, ತರಕಾರಿಗಳು ಮತ್ತು ಔಷಧಿಗಳ ಪೂರೈಕೆಗೆ ರಾಷ್ಟ್ರವ್ಯಾಪಿ ಲಾಕ್ ಡೌನ್ ಕಾಲದಲ್ಲಿ ತೊಂದರೆಯಾಗುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದ್ದರೂ, ನೈಜ ಸನ್ನಿವೇಶ ಬೇರೆಯಾಗಿತ್ತು. ಪೊಲೀಸರು ದಿನಸಿ ಅಂಗಡಿಗಳನ್ನು ಮುಚ್ಚುವಂತೆ ಬಲಾತ್ಕಾರ ಮಾಡಿದರು ಮತ್ತು ಡೆಲಿವರಿ ಏಜಂಟರಿಗೆ ಲಾಠಿ ರುಚಿ ತೋರಿಸಿದರು. ಬುಧವಾರ ಪೊಲೀಸರ ಲಾಠಿ ಪ್ರಹಾರ ಮತ್ತು ಜನರ ಗಾಬರಿ ಟ್ವಿಟರ್‌‌ನಲ್ಲಿ ಧ್ವನಿಸಿತು.

Recent Comments

Leave Comments

footer
Top