• 09 April 2020 22:36
Jai Kannada
Jai Kannada
Blog single photo
March 25, 2020

ಪೊಲೀಸರ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿಗಳ ಬಂಧನ, ಕಠಿಣ ಶಿಕ್ಷೆ: ಭಾಸ್ಕರರಾವ್

ಬೆಂಗಳೂರು: ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ಬಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸಂಜಯನಗರದ ಭೂಪಸಂದ್ರದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸುತ್ತಿದ್ದಾಗ ತ್ರಿಬಲ್ ರೈಡ್ ಮಾಡಿಕೊಂಡು ಬಂದಿದ್ದ ಬೈಕನ್ನು ತಡೆದಿದ್ದಾರೆ. ಇಷ್ಟಕ್ಕೇ ಬೈಕಿನಲ್ಲಿದ್ದ ಕಿಡಿಗೇಡಿಯೊಬ್ಬ ಕರ್ತವ್ಯ ನಿರತ ಪೊಲೀಸರೊಬ್ಬರನ್ನು ಕೆಳಕ್ಕೆ ಕೆಡವಿ ಹಲ್ಲೆ ಮಾಡಿದ್ದು, ಗೂಂಡಾವರ್ತನೆ ತೋರಿದ್ದಾರೆ. ಪೊಲೀಸರು ಸದಾ ಸಾರ್ವಜನಿಕರ ರಕ್ಷಣೆಗೆ ಬದ್ಧರಾಗಿರುತ್ತಾರೆ.

ಆದರೆ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರಿಂದ ಈ ಆರೋಪದ ಮೇಲೆ ಕಿಡಿಗೇಡಿಗಳ ಮೇಲೆ ಕೇಸ್ ದಾಖಲಿಸಿ ದುಷ್ಕರ್ಮಿಗಳನ್ನು ಬಂಧನಕ್ಕೊಳಪಡಿಸಲಾಗಿದೆ.

ನಾವು ಲಾಕ್ ಡೌನ್ ಮಾಡುತ್ತಿರುವುದು ಸಾರ್ವಜನಿಕ ಹಿತದೃಷ್ಟಿಯಿಂದ. ಆದರೆ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ಮಾಡುವುದು ಅಕ್ಷ್ಯಮ್ಯ ಅಪರಾಧ. ನಾವು ಅವರಿಬ್ಬರ ಮೇಲೆ ಸೆಕ್ಷನ್ 353 ಮತ್ತು ರೌಡಿ ಶೀಟ್ ಕೇಸ್ ಹಾಕಿ ಕಠಿಣವಾದ ಕಾನೂನು ಕ್ರಮ ಕೈಗೊಂಡು ಜೈಲಿಗೆ ಹಾಕುತ್ತೇವೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

Recent Comments

Leave Comments

footer
Top