• 09 April 2020 21:25
Jai Kannada
Jai Kannada
Blog single photo
March 25, 2020

ಇಂದು 10 ಹೊಸ ಪ್ರಕರಣ: ರಾಜ್ಯದಲ್ಲಿ 51ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ 

ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 10 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 51ಕ್ಕೆ ಏರಿಕೆಯಾಗಿದೆ. ಇಂದು ರಾತ್ರಿ ಕೊರೊನಾ ಸೋಂಕು ಎಷ್ಟು ಹೆಚ್ಚಾಗುತ್ತೋ ಗೊತ್ತಿಲ್ಲ ಎಂದು ಬೆಂಗಳೂರಿನಲ್ಲಿ ಸಚಿವ ಡಾ. ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. ಕೋವಿಡ್ 19 ಬಗ್ಗೆ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಚರ್ಚಿಸಿದರು.

ಕೊರೊನಾ ಸಂಬಂಧಿಸಿದಂತೆ ಟಾಸ್ಕ್ ಫೋರ್ಸ್ ಜತೆ ಮಾತನಾಡಿದ ಸಚಿವ ಡಾ. ಸುಧಾಕರ್, ನಿನ್ನೆ 41 ಪಾಸಿಟಿವ್ ಪ್ರಕರಣಗಳು ಇದ್ದಿದ್ದು ಇಂದು 51ಕ್ಕೆ ಏರಿಕೆಯಾಗಿದೆ. ಇವತ್ತು ರಾತ್ರಿ ಎಷ್ಟಾಗುತ್ತದೋ ಗೊತ್ತಿಲ್ಲ. ಜನರ ಆರೋಗ್ಯ, ಜೀವ ರಕ್ಷಣೆಗಾಗಿ 21 ದಿನಗಳ ಲಾಕ್ ಡೌನ್ ಅತ್ಯಗತ್ಯವಾಗಿದೆ. ಜನರಿಗೆ ತೊಂದರೆಯಾದರೂ ಸಹಿಸಿಕೊಳ್ಳಬೇಕು ಎಂದು ಸುಧಾಕರ್ ತಿಳಿಸಿದರು. 

Recent Comments

Leave Comments

footer
Top