• 09 April 2020 23:21
Jai Kannada
Jai Kannada
Blog single photo
March 25, 2020

ಕೊರೊನಾ...ಕೊರೊನಾ...ಕೊರೊನಾ...... ಎಲ್ಲೆಲ್ಲಿ ಏನೇನಾಯಿತು?

ಉಡುಪಿ: ದುಬೈನಿಂದ ಉಡುಪಿಗೆ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಪ್ರಕರಣ ಗೊತ್ತಾಗಿದೆ. ಮಾರ್ಚ್ 18ರಂದು 34 ವರ್ಷದ ಈ ವ್ಯಕ್ತಿ ಉಡುಪಿಗೆ ಬಂದಿದ್ದು, ಮಾರ್ಚ್ 23ರಂದು ಜ್ವರ ಕಾಣಿಸಿಕೊಂಡ ಬಳಿಕ ಉಡುಪಿಯ ಜಿಲ್ಲಾಸ್ಪಸ್ಪತ್ರೆಗೆ ದಾಖಲಾಗಿದ್ದರು. ವ್ಯಕ್ತಿಯ ಗಂಟಲಿನ ದ್ರವ ಮತ್ತು ರಕ್ತದ ಮಾದರಿಯ ಪರೀಕ್ಷೆಯಲ್ಲಿ ಅವರಿಗೆ ಕೊರನಾ ಸೋಂಕು ಇರುವುದು ಗೊತ್ತಾಗಿದೆ.  ಇದರಿಂದಾಗಿ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. 

* ಈ ನಡುವೆ ನೆಲಮಂಗಲ ಪಟ್ಟಣದಲ್ಲಿ ಕೊರೊನಾ ಸೋಂಕು ಹರಡದಂತೆ ಅಗ್ನಿಶಾಮಕ ಸಿಬ್ಬಂದಿ ಔಷಧಿ ಸಿಂಪಡಣೆ ಮಾಡಿದೆ. ಜಿಲ್ಲಾಧಿಕಾರಿ ರವೀಂದ್ರ ಆದೇಶದಂತೆ ಸಿಂಪಡಣೆ ಮಾಡಲಾಗಿದೆ.

* ಮೈಸೂರಿನ ಮಾದೇಗೌಡ ವೃತ್ತದ ಬಳಿ ಅನಗತ್ಯವಾಗಿ ಓಡಾಡುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ. 
ಕರ್ನಾಟಕದಲ್ಲಿ 21000 ಜನರು ಕ್ವಾರಂಟೈನ್‌ನಲ್ಲಿದ್ದಾರೆಂದು ಡಿಸಿಎಂ ಅಶ್ವತ್ ನಾರಾಯಣ್ ತಿಳಿಸಿದ್ದಾರೆ. ಎಲ್ಲರ ಮೇಲೆ ನಿಗಾ ಇಟ್ಟಿರುವುದಾಗಿ ಹೇಳಿದರು. 

* ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ರಾಮನಗರ ರೇಷ್ಮೆಗೂಡು ಮಾರುಕಟ್ಟೆ ಬಂದ್ ಮಾಡಲಾಗಿದೆ.
* ಅನಗತ್ಯವಾಗಿ ಓಡಾಡುತ್ತಿದ್ದವರ ಮೇಲೆ ತುಮಕೂರು ಕೊರಟಗೆರೆಯಲ್ಲಿ ಲಾಠಿಚಾರ್ಜ್ ಮಾಡಲಾಗಿದೆ.

* ಹೋಮ್ ಕ್ವಾರಂಟೈನ್ ಆದವರು ಮನೆಯಿಂದ ಹೊರಬರುವುದನ್ನು ತಪ್ಪಿಸಲು ರಾಯಚೂರಿನಲ್ಲಿ ಮನೆಗಳಿಗೆ ನೋಟಿಸ್ ಅಂಟಿಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. 

* ತಾಜ್ಯ ವಿಲೇವಾರಿ ಸಿಬ್ಬಂದಿ ಮೇಲೆ ಲಾಠಿ ಚಾರ್ಜ್‌ನಿಂದ ಪೊಲೀಸರ ಮೇಲೆ ಮಹನಗರಪಾಲಿಕೆ ಅಸಮಾಧಾನ ,
ಹೋಮ್ ಕ್ವಾರಂಟೈನ್ ಆದವರು ರಸ್ತೆಯಲ್ಲಿ ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ಸರ್ಜಾಪುರದಲ್ಲಿ ವ್ಯಕ್ತಿಯ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. 
* ಮೋದಿ ಕ್ಯಾಬಿನೆಟ್ ಸಭೆಯಲ್ಲಿ ವೈರಸ್ ಹರಡುವ ಭೀತಿಯಿಂದ ಸಚಿವ ಸಂಪುಟದ ಸದಸ್ಯರು ಒಬ್ಬರಿಂದ ಒಬ್ಬರಿಗೆ ಅಂತರ ಕಾಯ್ದುಕೊಂಡು ಚರ್ಚೆ ನಡೆಸಿದರು. 

*  ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರದಿದ್ದರೆ ಪರಿಸ್ಥಿತಿ ನಿಯಂತ್ರಿಸುವುದಕ್ಕೆ ಸೇನೆ ಸರ್ವ ಸನ್ನದ್ಧವಾಗಿರುವಂತೆ ಸಶಸ್ತ್ರ ಪಡೆಗೆ ಸೂಚಿಸಲಾಗಿದೆ. 
 

Recent Comments

Leave Comments

footer
Top