• 09 April 2020 22:50
Jai Kannada
Jai Kannada
Blog single photo
March 25, 2020

ಕೊರೊನಾ ತಡೆಗೆ ಭಾರತ  21 ದಿನಗಳ ಸಂಪೂರ್ಣ ಲಾಕ್‌ಡೌನ್ ಮಾಡಿದ್ದೇಕೆ?

ನವದೆಹಲಿ: ಭಾರತ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ವಿಮಾನನಿಲ್ದಾಣಗಳನ್ನು ಲಾಕ್ ಡೌನ್ ಮಾಡುವುದಕ್ಕೆ ಮುಂಚಿತವಾಗಿಯೇ ವಿದೇಶಗಳಿಂದ ಸುಮಾರು 64,000 ಜನರು ಭಾರತಕ್ಕೆ ವಾಪಸಾಗಿರುವುದರಿಂದ ಭಾರತವು ಕಠಿಣವಾದ 21 ದಿನಗಳ ಲಾಕ್‌ಡೌನ್ ಆದೇಶವನ್ನು ಜಾರಿಗೆ ತಂದಿದೆ. ಕೆಲವು ಪ್ರದೇಶಗಳನ್ನು ಕರ್ಫ್ಯೂನಲ್ಲಿ ಕೂಡ ಇಡಲಾಗಿದ್ದು, ವಿದೇಶದಿಂದ ವಾಪಸಾಗಿರುವವರು ಹೊರಕ್ಕೆ ಬಂದು ಸಮುದಾಯದಲ್ಲಿ ಕೊರೊನಾ ಹರಡದಂತೆ ತಡೆಯುವುದು ಇದರ ಉದ್ದೇಶವಾಗಿದೆ.

ಕಳೆದ ಒಂದು ವಾರದಲ್ಲಿ ಕೋವಿಡ್ ಪಾಸಿಟಿವ್ ಕೇಸ್ ಹೆಚ್ಚಳಕ್ಕೆ ವಿದೇಶದಿಂದ ಹೆಚ್ಚೆಚ್ಚು ಭಾರತೀಯರು ವಾಪಸು ಬಂದಿರುವುದರ ಫಲವಾಗಿದೆ ಎಂದು ಹಿರಿಯ ಆರೋಗ್ಯ ಸಚಿವಾಲಯ ಮತ್ತು ಐಸಿಎಂಆರ್ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 8000 ಜನರನ್ನು 14 ದಿನಗಳ ಕಾಲ ಇನ್ಸ್‌ಟಿಷ್ಯೂಷನಲ್ ಕ್ಯಾಂಪ್‌ಗಳಲ್ಲಿ ಇಡಲಾಗಿದ್ದರೂ, ಬಹುತೇಕ ಜನರು ಮನೆಯಲ್ಲೇ ಕ್ವಾರಂಟೈನ್‌ನಲ್ಲಿದ್ದು ಅವರ ಮೇಲೆ ನಿಗಾ ವಹಿಸಲಾಗಿದೆ. ಅವರ ವಿವರಗಳು ಸಂಯೋಜಿತ ರೋಗ ನಿರ್ವಹಣೆ ವ್ಯವಸ್ಥೆಯಲ್ಲಿ ದಾಖಲಾಗಿದೆ. ಆದರೂ ಅವರು ಅವರು ಮನೆಯಿಂದ ಹೊರಬಂದು ಬೇರೆಯವರ ಜತೆ ಸಂಪರ್ಕ ಹೊಂದುವ ಸಾಧ್ಯತೆಯಿರುವುದರಿಂದ ಅವರನ್ನು ಪ್ರತ್ಯೇಕವಾಗಿ ಮನೆಯಲ್ಲೇ ಇರುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. 

14 ದಿನಗಳೊಳಗೆ ಈ ವ್ಯಕ್ತಿಗಳಿಗೆ ಕೊರೊನಾ ಲಕ್ಷಣ ಕಂಡುಬಂದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಉಳಿದವರು ಸುರಕ್ಷಿತವಾಗಿ ಕ್ವಾರಂಟೈನ್ ಅವಧಿ ಪೂರೈಸಿದರೆ ಅವರು ಡೇಂಜರ್ ಜೋನ್‌ನಿಂದ ಹೊರಬರುತ್ತಾರೆ.
ವಿದೇಶ ಪ್ರಯಾಣ ಮಾಡಿದವರ ಸಮೂಹ ಮತ್ತು ಅವರ ಸಂಪರ್ಕಕ್ಕೆ ಬಂದವರಿಂದ ಕೊರೊನಾ ಪ್ರಕರಣದ ತೀವ್ರ ಏರಿಕೆ ಹಾಗೂ ತೀವ್ರ ಫ್ಲೂ ಅಥವಾ ನ್ಯೂಮೋನಿಯಾದೊಂದಿಗೆ ಇತರೆ ವ್ಯಕ್ತಿಗಳಿಗೂ ಪಾಸಿಟಿವ್ ಆಗಿರುವುದು ಕಮ್ಯುನಿಟಿ ಸ್ಪ್ರೆಡ್ ಅಥವಾ ಸಮುದಾಯ ಹರಡುವಿಕೆಗೆ ಉದಾಹರಣೆಯಾಗಿರುತ್ತದೆ. ಈ ಹಂತಕ್ಕೆ ತಲುಪಿದರೆ ಕೊರೊನಾ ವೈರಸ್ ವೇಗವಾಗಿ ಹರಡುವುದರಿಂದ ಅದರ ನಿಯಂತ್ರಣ ಹತೋಟಿ ತಪ್ಪುತ್ತದೆಂದು ತಜ್ಞರು ಭಾವಿಸಿದ್ದಾರೆ. ಆದ್ದರಿಂದಲೇ ಕಠಿಣವಾದ ಲಾಕ್ ಡೌನ್ ಮತ್ತು ಲಾಕ್‌ಡೌನ್ ಉಲ್ಲಂಘನೆ ಮಾಡಿದರೆ ದಂಡ ಅಥವಾ ಕೇಸ್ ಹಾಕುವ ಮೂಲಕ ಪರಿಣಾಮಕಾರಿ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.

Recent Comments

Leave Comments

footer
Top